ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ ಲೋಕಸಭಾ ಕ್ಷೇತ್ರ: ಗೆಲುವಿನ ವಿವರ

Published 4 ಜೂನ್ 2024, 14:27 IST
Last Updated 4 ಜೂನ್ 2024, 14:27 IST
ಅಕ್ಷರ ಗಾತ್ರ

ಕ್ಷೇತ್ರದ ಹೆಸರು; ಶಿವಮೊಗ್ಗ
ಗೆದ್ದವರ ಹೆಸರು; ಬಿ.ವೈ.ರಾಘವೇಂದ್ರ, ಪಕ್ಷ; ಬಿಜೆಪಿ
ಗೆದ್ದ ಅಭ್ಯರ್ಥಿ ಪಡೆದ ಮತ; 7,78,721
ಸಮೀಪದ ಪ್ರತಿಸ್ಪರ್ಧಿ: ಗೀತಾ ಶಿವರಾಜಕುಮಾರ್‌, ಪಕ್ಷ: ಕಾಂಗ್ರೆಸ್‌; ಪಡೆದ ಮತ; 5,35,006
ಗೆಲುವಿನ ಅಂತರ; 2,43,715

ಗೆಲ್ಲಲು ಕಾರಣವಾದ ಅಂಶಗಳು: ಬಿಜೆಪಿ ಸಂಘಟನಾ ಬಲ, ಬಿ.ವೈ.ರಾಘವೇಂದ್ರ ಹಿಂದಿನ ಎರಡು ಅವಧಿಯಲ್ಲಿ ಮಾಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಮತದಾರರಿಗೆ ಪರಿಣಾಮಕಾರಿಯಾಗಿ ಪರಿಚಯಿಸಿದ್ದು. ಬಿಜೆಪಿಯ ವ್ಯವಸ್ಥಿತ ಪ್ರಚಾರ ಕಾರ್ಯ. ನಾಯಕರು ಹಾಗೂ ಕೆಳಹಂತದಲ್ಲಿ ಕಾರ್ಯಕರ್ತರ ನಡುವಿನ ಸಮನ್ವಯತೆ. ಬಿಜೆಪಿ–ಜೆಡಿಎಸ್‌ ನಡುವಿನ ಮೈತ್ರಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ವರ್ಚಸ್ಸು.

ಸೋತ ಅಭ್ಯರ್ಥಿಗೆ ಹಿನ್ನಡೆ ತಂದ ಅಂಶಗಳು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳ ಫಲ ಕೊಡಲಿವೆ, ಮತದಾರರು ಹೇಗಿದ್ದರೂ ಕೈ ಬಿಡುವುದಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸ ಕಾಂಗ್ರೆಸ್‌ಗೆ ಕೈಕೊಟ್ಟಿದೆ. ಗೀತಾ ಶಿವರಾಜಕುಮಾರ್ ಅವರನ್ನು ದುರ್ಬಲ ಅಭ್ಯರ್ಥಿ ಎಂದು ವಿರೋಧಿಗಳು ಬಿಂಬಿಸಿದ್ದು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಸಮನ್ವಯತೆಯ ಕೊರತೆ, ಸಂಘಟಿತ ಪ್ರಚಾರ ಇಲ್ಲದಿರುವುದು, ಮೂಲ ಕಾಂಗ್ರೆಸ್ಸಿಗರು, ವಲಸಿಗರು ಎಂಬ ತಿಕ್ಕಾಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT