ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟಿಗೆಹಾರ ತಲುಪಿರುವ 145 ಮಂದಿ

ಶಿವರಾತ್ರಿ ಪ್ರಯುಕ್ತ ಭದ್ರಾವತಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ
Last Updated 28 ಫೆಬ್ರುವರಿ 2022, 4:18 IST
ಅಕ್ಷರ ಗಾತ್ರ

ಭದ್ರಾವತಿ: ನಗರದಿಂದ ಧರ್ಮಸ್ಥಳಕ್ಕೆ ಐದು ದಿನಗಳ ಹಿಂದೆ ಪಾದಯಾತ್ರೆ ಆರಂಭಿಸಿದ್ದ ಇಲ್ಲಿನ ಅಶ್ವಥ್ ಕಟ್ಟೆ ಧರ್ಮಸ್ಥಳ ಪಾದಾಯಾತ್ರೆ ತಂಡ ಭಾನುವಾರ ಕೊಟ್ಟಿಗೆಹಾರ ರಂಗಮಂದಿರ ತಲುಪಿ ವಿಶ್ರಾಂತಿ ಪಡೆಯುತ್ತಿದೆ.

ಪ್ರತಿದಿನ ಕನಿಷ್ಠ 20 ಕಿ.ಮೀ.ನಿಂದ ಗರಿಷ್ಠ 40 ಕಿ.ಮೀ. ಕ್ರಮಿಸಿರುವ ತಂಡ ಒಟ್ಟು 132 ಕಿ.ಮೀ. ಪಾದಯಾತ್ರೆ ಮುಗಿಸಿದೆ. ಧರ್ಮಸ್ಥಳ ತಲುಪಲು 41 ಕಿ.ಮೀ. ಹಾದಿ ಸಾಗಬೇಕು ಎಂದು ಸಮಿತಿ ಅಧ್ಯಕ್ಷ ಎನ್. ಸಂಪತ್ ಕುಮಾರ್ ತಿಳಿಸಿದ್ದಾರೆ.

‘ತಂಡದಲ್ಲಿ ಒಟ್ಟು 145 ಜನರಿದ್ದು ಅದರಲ್ಲಿ 60 ಮಹಿಳೆಯರು, 85 ಪುರುಷರು ಹೆಜ್ಜೆ ಹಾಕುತ್ತಿದ್ದಾರೆ. ಇದು ಸಮಿತಿ ವತಿಯಿಂದ 10ನೇ ವರ್ಷದ ಪಾದಯಾತ್ರೆಯಾಗಿದೆ. ಕಳೆದ 23ರಂದು ಕಾಗದನಗರದ ಈಶ್ವರ ದೇವಾಲಯದಿಂದ ಪಾದಯಾತ್ರೆ ಆರಂಭಿಸಿದ್ದೆವು. ಇಲ್ಲಿ ತನಕ ಯಾವುದೇ ಸಮಸ್ಯೆ ಇಲ್ಲದೆ ಕೊಟ್ಟಿಗೆಹಾರ ತಲುಪಿದ್ದೇವೆ. ಇಲ್ಲಿವೆರೆಗ ಸಾವಿರಕ್ಕೂ ಅಧಿಕ ಮಂದಿ ನಮ್ಮೊಂದಿಗೆ ಹೆಜ್ಜೆ ಹಾಕಿದ್ದಾರೆ’ ಎಂದರು.

‘ನಮ್ಮ ಜತೆಗೆ ಒಂದು ಆಂಬುಲೆನ್ಸ್ ಹಾಗೂ ಒಬ್ಬ ವೈದ್ಯರು ಇದ್ದಾರೆ. ಲೋಕ ಕಲ್ಯಾಣಾರ್ಥವಾಗಿ ಸಕಲ ವ್ಯವಸ್ಥೆಗಳೊಂದಿಗೆ ಪಾದಯಾತ್ರೆ ಹೊರಟಿದ್ದೇವೆ’ ಎಂದು ಸಮಿತಿ ಪ್ರಧಾನಕಾರ್ಯದರ್ಶಿ ಮಣಿಮಾರನ್, ಖಜಾಂಚಿ ಜಿ.ಎಸ್. ನಾಗರಾಜ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT