ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 4,425 ಕೋಟಿ ವೆಚ್ಚದಲ್ಲಿ 216 ಕಿ.ಮೀ ಚತುಷ್ಪಥ ರಸ್ತೆ

57 ಕಿ.ಮೀ ವರ್ತುಲ ರಸ್ತೆಗೆ ₹ 810 ಕೋಟಿಗೆ ಪ್ರಸ್ತಾವ: ಸಂಸದ ರಾಘವೇಂದ್ರ
Last Updated 9 ಮೇ 2020, 14:29 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಅಭಿವೃದ್ಧಿಕಾಮಗಾರಿಗಳುವೇಗಪಡೆದುಕೊಂಡಿವೆ. ₹4,425 ಕೋಟಿ ವೆಚ್ಚದಲ್ಲಿ 216 ಕಿ.ಮೀ. ತುಮಕೂರು–ಶಿವಮೊಗ್ಗ ಚತುಷ್ಪಥ ರಸ್ತೆ ಕಾಮಗಾರಿ ಆರಂಭವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸಮೀಪದ ಹರಕೆರೆಯಲ್ಲಿ ಶಿವಮೊಗ್ಗ-ತುಮಕೂರು ಹೊರವರ್ತುಲ ರಸ್ತೆಯ ತುಂಗಾ ನದಿ ತೀರದಲ್ಲಿ ನಿರ್ಮಾಣವಾಗುತ್ತಿರುವಸಂಪರ್ಕ ಸೇತುವೆ ಕಾಮಗಾರಿ ವೀಕ್ಷಣೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಪ್ರಸ್ತುತ ಎಂಆರ್‌ಎಸ್ ವೃತ್ತದಿಂದಶ್ರೀರಾಂಪುರದವರೆಗಿನ 15 ಕಿ.ಮೀ.ರಸ್ತೆ, ಹೊಳೆಹೊನ್ನೂರು ರಸ್ತೆ(ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಹಿಂಭಾಗ)ಯಿಂದ ಎಂಆರ್‌ಎಸ್ ವೃತ್ತದವರೆಗಿನ 4ಕಿ.ಮೀ.ರಸ್ತೆ ನಿರ್ಮಾಣ ಕಾರ್ಯಕ್ಕೆ ಅನುಮೋದನೆ ದೊರೆತಿದೆ. ಶ್ರೀರಾಮಪುರದಿಂದ ಹೊಳೆಹೊನ್ನೂರು ರಸ್ತೆವರೆಗಿನವರೆಗಿನ 15ಕಿ.ಮೀ. ವರ್ತುಲರಸ್ತೆಯ ಕಾಮಗಾರಿಯ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಲಾಗಿದೆ.₹20 ಕೋಟಿ ವೆಚ್ಚದಲ್ಲಿ 34 ಕಿ.ಮೀ. ಕಾಮಗಾರಿ ಆರಂಭಿಸಲಾಗಿದೆ.ಎಂಆರ್‌ಎಸ್ ವೃತ್ತದಿಂದಶ್ರೀರಾಮಪುರದ ಮೊದಲ ಹಂತದ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರಚಾಲನೆ ನೀಡಿದೆ. ಒಟ್ಟು ₹810 ಕೋಟಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಶೇ 60ರಷ್ಟುಹಣದ ನೆರವು ನೀಡುತ್ತಿದೆ ಎಂದು ವಿವರ ನೀಡಿದರು.

ರೈಲ್ವೆ ಮೇಲು ಸೇತುವೆ, ಶರಾವತಿ ಹಿನ್ನೀರಿನ ತೂಗು ಸೇತುವೆ

ಕಾಮಗಾರಿಶೀಘ್ರಆರಂಭವಾಗಲಿದೆ.ಬೆಟ್ಟದಹಳ್ಳಿಯಿಂದ ಶ್ರೀರಾಮಪುರದವರೆಗೆ 57 ಕಿ.ಮೀ. ಚತುಷ್ಪಥ ವರ್ತು ರಸ್ತೆ ಕಾಮಗಾರಿಮಧ್ಯೆ ಭದ್ರಾ ಮತ್ತು ತುಂಗಾ ನದಿಗೆ 3 ದೊಡ್ಡ ಸೇತುವೆಗಳು, ಎಂಆರ್‌ಎಸ್ ಬಳಿ ಅರ್ಧ ಕಿ.ಮೀ. ಮೇಲು ಸೇತುವೆ, ಹಲವು ಕಿರು ಸೇತುವೆಗಳು ನಿರ್ಮಾಣವಾಗಲಿವೆ.ಎರಡುವರ್ಷಗಳಒಳಗೆ ಎಲ್ಲಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ವಿವರ ನೀಡಿದರು.

ಶಿವಮೊಗ್ಗ-ಚಿತ್ರದುರ್ಗದರಸ್ತೆ ಕಾಮಗಾರಿಗೆ ₹528 ಅನುದಾನ ಬಿಡುಗಡೆ ಮಾಡುವಂತೆ ಕೋರಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶಿವಮೊಗ್ಗ ವಿದ್ಯಾನಗರದ ಬಳಿ ಮೇಲು ಸೇತುವೆನಿರ್ಮಾಣಕ್ಕೆ ₹ 42 ಕೋಟಿಬಿಡುಗಡೆಗೂ ಮನವಿ ಮಾಡಲಾಗಿದೆ.ಜಿಲ್ಲೆಯಲ್ಲಿ ಜಿಯೋ, ಏರ್‌ಟೆಲ್‌ ಸಂಸ್ಥೆಬಾಕಿ ಇರುವ ಸ್ಥಾವರಗಳನ್ನು ಶೀಘ್ರ ಪೂರ್ಣಗೊಳಿಸುವ ವಿಶ್ವಾಸವಿದೆ.ವಿಮಾನ ನಿಲ್ಧಾಣ ಕಾಮಗಾರಿ ನನೆಗುದಿಗೆ ಬಿದ್ದಿತ್ತು.ಈಗ ಮತ್ತೆ ಚಾಲನೆ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.ಮೇ 13 ಟೆಂಡರ್ ಸಲ್ಲಿಸಲು ಕೊನೆಯ ದಿನ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ನೀರಾವರಿ ಯೋಜನೆಯ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ.₹1,250 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ಆರಂಭವಾಗುತ್ತಿವೆ. ಹೊಸಹಳ್ಳಿ ತುಂಗಾ ಏತ ನೀರಾವರಿ, ಸೊರಬದ ಮೂಡಿ ಮತ್ತು ಮೂಗೂರು ನೀರಾವರಿ, ಶಿಕಾರಿಪುರದ ಪುರದ ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಇದರಿಂದ ತಮಡಿಹಳ್ಳಿ, ಕುಂಸಿ, ಆಯನೂರು ಭಾಗದ ಸುಮಾರು 75 ಕೆರೆಗಳಿಗೆ ನೀರು ಹರಿಸಲಾಗುತ್ತದೆ. ಜತೆಗೆ, ಅಂಜನಾಪುರ ಜಲಾಶಯಕ್ಕೂ ನೀರು ಹರಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಪಾಲಕ ಎಂಜಿನಿಯರ್ ಪೀರ್ ಪಾಷ, ಬಿಜೆಪಿ ಮುಖಂಡರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ದತ್ತಾತ್ರಿ, ಬಳ್ಳೆಕೆರೆ ಸಂತೋಷ್, ಮಂಜುನಾಥ್,ಗುತ್ತಿಗೆದಾರ ರಾಜಾಭೋವಿಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT