ಗುರುವಾರ , ಮೇ 6, 2021
23 °C

ವರಕೋಡು: ನೂತನ ಶಿಲಾಯುಗದ ಅವಶೇಷ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ತಾಲ್ಲೂಕು ಕೇಂದ್ರದಿಂದ ಆಗ್ನೇಯ ದಿಕ್ಕಿಗೆ 6 ಕಿ.ಮೀ. ದೂರದಲ್ಲಿರುವ ವರಕೋಡು ಗ್ರಾಮದಲ್ಲಿ ನೂತನ ಶಿಲಾಯುಗದ ಅವಶೇಷಗಳು ಪತ್ತೆಯಾಗಿವೆ.

ಸಂಶೋಧನಾರ್ಥಿ ನವೀನ್ ಆಚಾರ್ಯ ವರಕೋಡು ಅವರು ಈ ಪರಿಸರದಲ್ಲಿ ಕ್ಷೇತ್ರಕಾರ್ಯ ಕೈಗೊಂಡಾಗ ಈ ನೂತನ ಶಿಲಾಯುಗದ ಅವಶೇಷಗಳು ಪತ್ತೆಯಾಗಿವೆ.

ವರಕೋಡು ಗ್ರಾಮದಿಂದ 1 ಕಿ.ಮೀ. ದೂರ ಕಲ್ಲಹಳ್ಳ ಭೂ ಪರಿಸರದಲ್ಲಿ ನೂತನ ಶಿಲಾಯುಗದ ಆಯುಧಗಳು ದೊರೆತಿವೆ. ಈ ಹಿಂದೆ ಡಾ.ಪ್ರವೀಣ್ ದೊಡ್ಡಗೌಡ್ರು ಮತ್ತು ನವೀನ್ ಆಚಾರ್ಯ ಪತ್ತೆ ಮಾಡಿದ ನೆಲೆಯಿಂದ ಒಂದೂವರೆ ಕಿ.ಮೀ. ದೂರದಲ್ಲಿ ಪ್ರಸ್ತುತ ನೆಲೆ ಕಂಡುಬಂದಿದೆ.

‘ಕ್ಷೇತ್ರಕಾರ್ಯ ಕೈಗೊಂಡಾಗ ಕೆಂಪುವರ್ಣದ ಮಡಕೆ ಚೂರು, ಬೃಹತ್ ಶಿಲಾಯುಗದ ಕೆಂಪು ಮತ್ತು ಕಪ್ಪು ವರ್ಣದ ಮಡಕೆ ಹಾಗೂ ಕಬ್ಬಿಣದ ಕಿಟ್ ದೊರೆತಿವೆ. ಇದಲ್ಲದೆ ಭೂ ಮೇಲ್ಮೈನಲ್ಲಿ ಮಾನವನು ಆಯುಧಗಳನ್ನು ತಯಾರಿಸಲು ಬಳಸಿದ ಅಪೂರ್ಣ ಕೈ ಕೊಡಲಿಗಳು, ರಿಂಗ್ ಸ್ಟೋನ್ ಮುಂತಾದವುಗಳು ದೊರೆತಿವೆ’ ಎಂದು ನವೀನ್ ಆಚಾರ್ಯ ಪತ್ರಿಕೆಗೆ ನೀಡಿದರು.

‘ದಕ್ಷಿಣ ಭಾರತದಲ್ಲಿ ನೂತನ ಶಿಲಾಯುಗ ಸಂಸ್ಕೃತಿಯನ್ನು ಕ್ರಿ.ಪೂ. 3000-1400ರ ವರೆಗೆ ಗುರುತಿಸಬಹುದು. ಈ ಪರಿಸರದಲ್ಲಿ ದೊರೆತಿರುವ ರಂಧ್ರ ಉಳ್ಳ ಶಿಲೆಯನ್ನು (ರಿಂಗ್‌ ಸ್ಟೋನ್) ಧಾನ್ಯ ಸಂಸ್ಕರಣೆಗೆ ಮತ್ತು ಆಯುಧಗಳನ್ನು ನಯಗೊಳಿಸಲು ಬಳಸಿರಬಹುದು. ನೂತನ ಶಿಲಾಯುಗದ ಮಾನವನು ತಿರುಗಣೆ ಚಕ್ರ ಬಳಸಿ ಮಡಕೆಗಳನ್ನು ಮಾಡುತ್ತಿದ್ದನು’
ಎಂದು ಪ್ರವೀಣ್ ದೊಡ್ಡೇಗೌಡ್ರು ಅವರು ಕ್ಷೇತ್ರಕಾರ್ಯದಲ್ಲಿ ದೊರೆತ ಆಯುಧಗಳ ಕುರಿತು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು