ಗುರುವಾರ , ಫೆಬ್ರವರಿ 25, 2021
19 °C

ಚಿತ್ರಾನ್ನದಲ್ಲಿ ವಿಷ ಬೆರೆಸಿ ಕೊಲೆಗೆ ಯತ್ನ: ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ತಾಲ್ಲೂಕಿನ ಹೊಸಗುಂದ ಗ್ರಾಮದಲ್ಲಿ ಚಿತ್ರಾನ್ನ ಹಾಗೂ ಚಹಾದಲ್ಲಿ ವಿಷ ಬೆರೆಸಿ ಇಂದಿರಮ್ಮ ಎಂಬುವವರನ್ನು ಕೊಲೆ ಮಾಡಲು ಪ್ರಯತ್ನ ನಡೆಸಲಾಗಿದೆ ಎಂದು ಆರೋಪಿಸಿ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ.

‘ಮನೆಯಲ್ಲಿ ಚಿತ್ರಾನ್ನ, ಚಹಾ ತಯಾರಿಸಿ ದೇವರಿಗೆ ಕೈಮುಗಿದು ಸ್ವಲ್ಪ ಹೊತ್ತಿನ ನಂತರ ಅಡುಗೆ ಮನೆಗೆ ಮರಳಿ, ಚಿತ್ರಾನ್ನ ಹಾಗೂ ಚಹಾ ಸೇವಿಸಿದ ತಕ್ಷಣ ಅಸ್ವಸ್ಥಗೊಂಡೆ. ಪುತ್ರಿ ಭದ್ರಮ್ಮ ಬಂದು ಪರಿಶೀಲಿಸಿದಾಗ ಚಿತ್ರಾನ್ನ ಹಾಗೂ ಚಹಾದಲ್ಲಿ ವಿಷ ಬೆರೆಸಿರುವುದು ಬೆಳಕಿಗೆ ಬಂದಿದೆ’ ಎಂದು ಇಂದಿರಮ್ಮ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇಂದಿರಮ್ಮ ಚೇತರಿಸಿಕೊಂಡಿದ್ದಾರೆ. ಗ್ರಾಮಾಂತರ ಠಾಣೆಗೆ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.