ಗುರುವಾರ , ಆಗಸ್ಟ್ 18, 2022
25 °C

ಜೂನ್ 20ರಿಂದ ಧರಣಿ: ಪ್ರಣವಾನಂದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಆರ್ಯ ಈಡಿಗ ಸಮುದಾಯದವರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಒಪ್ಪದಿದ್ದರೆ ಜೂನ್ 20ರಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು’ ಎಂದು ರಾಷ್ಟ್ರೀಯ ಈಡಿಗ ಮಹಾ ಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ತಿಳಿಸಿದ್ದಾರೆ.

‘ಬೃಹ್ಮಶ್ರೀ ನಾರಾಯಣಗುರು ನಿಗಮ ಸ್ಥಾಪನೆ, ಸೇಂದಿ ವೃತ್ತಿ ಪುನರಾರಂಭ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೊದಲ ಹಂತದಲ್ಲಿ 151 ಕಿ.ಮೀ. ಪಾದಯಾತ್ರೆ ನಡೆಸಲಾಗಿದೆ. ಎರಡನೇ ಹಂತದ ಹೋರಾಟಕ್ಕೆ ಕಲ್ಯಾಣ ಕರ್ನಾಟಕದ 39 ತಾಲ್ಲೂಕುಗಳಲ್ಲಿ ಪೂರ್ವತಯಾರಿ ಸಭೆ ಮಾಡಲಾಗಿದೆ’ ಎಂದ ಅವರು ತಿಳಿಸಿದ್ದಾರೆ.

‘ಜೂನ್ 20ರ ಬೆಳಿಗ್ಗೆ 9ಕ್ಕೆ ತೆಲಂಗಾಣ ಸರ್ಕಾರದ ಅಬಕಾರಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀನಿವಾಸ ಗೌಂಡರ್ ಸತ್ಯಾಗ್ರಹಕ್ಕೆ ಚಾಲನೆ ನೀಡುವರು. ನಟ ಸುಮನ್, ಶಾಸಕ ಸುಭಾಷ್ ಗುತ್ತೇದಾರ್, ಕಾಂಗ್ರೆಸ್‌ ನಾಯಕ ಯು.ಟಿ. ಖಾದರ್, ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೇದಾರ್, ಜೆಡಿಎಸ್ ನಾಯಕ ಬಾಲರಾಜ ಗುತ್ತೇದಾರ ಭಾಗವಹಿಸುವರು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.