ಶಿವಮೊಗ್ಗ: ಮೈಸೂರಿನ ಸಂಕೇತಿ ಸಂಘಹೊಸಳ್ಳಿಯ ಗಮಕ ಭವನದಲ್ಲಿಫೆ.9ರಂದು ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸಂಕೇತಿ ಒಂದು ಪುಟ್ಟ ಸಮುದಾಯ. ಇಡೀ ವಿಶ್ವದಲ್ಲೇ30 ಸಾವಿರ ಜನಇದ್ದಾರೆ. ಸಂಸ್ಕೃತ, ವೇದಾಂತ, ಗಮಕಮತ್ತಿತರಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.ಸಂಘಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮಎಂದುಸಂಘದ ಉಪಾಧ್ಯಕ್ಷ ಎಚ್.ಕೆ.ಕೇಶವಮೂರ್ತಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ವಿಚಾರ ಗೋಷ್ಠಿಗಳು, ಸಾಧಕರಿಗೆ ಸನ್ಮಾನ, ಪುಸ್ತಕ ಬಿಡುಗಡೆ, ಸಂಘದ ವೀಡಿಯೊಪ್ರದರ್ಶನ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಗಮಕಿ ಎಚ್.ಆರ್.ಕೇಶವಮೂರ್ತಿ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಉಪಸ್ಥಿತರಿರುವರು. ಕಲಾವಿದ ಎಚ್.ಕೆ.ವೆಂಕಟರಾಮು ಬಹುಮಾನ ವಿತರಿಸುವರು. ಸಂಘದ ಅಧ್ಯಕ್ಷ ಎಂ.ಎನ್.ಅನಂತ್ ಅಧ್ಯಕ್ಷತೆ ವಹಿಸುವರುಎಂದು ವಿವರ ನೀಡಿದರು.

ಬೆಳಿಗ್ಗೆ 7ಕ್ಕೆ ಗಂಗಾಪೂಜೆ ಕಾರ್ಯಕ್ರಮ. 10ಕ್ಕೆಸಭಾ ಕಾರ್ಯಕ್ರಮ ಇರುತ್ತದೆ. ಎಸ್.ಎಲ್.ಬೈರಪ್ಪ ಅವರ ಧರ್ಮಶ್ರೀ ಕಾದಂಬರಿಯ ಸಂಕೇತಿ ಅವತರಣಿಕೆ ಹಾಗೂ ಮತ್ತೂರು ಸುಬ್ಬಣ್ಣ ಅವರ ಹಳ್ಳಿಸುಬ್ಬ ಪುಸ್ತಕ ಬಿಡುಗಡೆಯಾಗಲಿವೆ.ಮಧ್ಯಾಹ್ನದ ಗೋಷ್ಠಿಯಲ್ಲಿ ‘ಸಂಕೇತಿಗಳು ಮತ್ತು ಸ್ವ-ಉದ್ಯೋಗ’ ಕುರಿತು ವಿಜ್ಞಾನಿ ಡಾ.ಎಚ್.ಎಸ್.ಸುಬ್ರಮಣ್ಯ, ಕೈಗಾರಿಕೋದ್ಯಮಿ ಎಲ್.ಎಚ್.ಅರವಿಂದ ಉಪನ್ಯಾಸ ನೀಡುವರು. 2ನೇ ಗೋಷ್ಠಿಯಲ್ಲಿ ‘ಸಂಕೇತಿತನ ಉಳಿಸಿಕೊಳ್ಳುವ ಸವಾಲು’ ಕುರಿತು ಎಲ್.ವಿ.ಸೂರ್ಯನಾರಾಯಣ, ಎಚ್.ಡಿ.ಆನಂದಕುಮಾರ ಉಪನ್ಯಾಸ ನೀಡುವರು.ಸಂಘಕ್ಕೆ ಹಲವುವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 21 ಗಣ್ಯರನ್ನು ಸನ್ಮಾನಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪದ್ಮಾದಿವಾಕರ್, ಎಚ್.ಎನ್.ಲಕ್ಷ್ಮೀಕಾಂತ್, ಶ್ರೀನಿವಾಸ್, ಆನಂದ್, ಹರೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.