ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಜೇಯ, ಅದಮ್ಯ ಕೃತಿಗಳ ಚರ್ಚೆ, ಅಭಿನಂದನಾ ಸಮಾರಂಭ ಆ.12ಕ್ಕೆ

Published 9 ಆಗಸ್ಟ್ 2024, 16:22 IST
Last Updated 9 ಆಗಸ್ಟ್ 2024, 16:22 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಷ್ಟ್ರೋತ್ಥಾನ ಬಳಗದಿಂದ ಚಂದ್ರಶೇಖರ ಆಜಾದ್ ಜೀವನ ಆಧಾರಿತ ಕಾದಂಬರಿ ಅಜೇಯ ಮತ್ತು ವಾಸುದೇವ ಬಲವಂತ ಪಡಕೆ ಜೀವ ಆಧಾರಿತ ಕಾದಂಬರಿ ಅದಮ್ಯ ಕುರಿತ ಉಪನ್ಯಾಸ ಹಾಗೂ ಲೇಖಕ ಡಾ. ಬಾಬು ಕೃಷ್ಣಮೂರ್ತಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಆ.12 ರಂದು ಸಂಜೆ 6ಕ್ಕೆ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷ ಡಾ.ಪಿ.ಆರ್.ಸುರೇಂದ್ರ ತಿಳಿಸಿದರು.

ಅಜೇಯ ಕಾದಂಬರಿಗೆ 50 ವರ್ಷ ಹಾಗೂ ಅದಮ್ಯ ಕಾದಂಬರಿ ಬಿಡುಗಡೆಯಾಗಿ 40 ವರ್ಷಗಳು ಕಳೆದಿವೆ. ಈ ಎರಡೂ ಕೃತಿಗಳು ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರ ಜೀವನಗಾಥೆಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಅಜೇಯ ಕೃತಿ ಬಿಡುಗಡೆಯಾಗುವವರೆಗೂ ಚಂದ್ರಶೇಖರ್ ಆಜಾದ್ ಬಗ್ಗೆ ಅಷ್ಟೊಂದು ಮಾಹಿತಿ ಇರಲಿಲ್ಲ. ಕೃತಿ ಬಂದ ಮೇಲೆ ಅನೇಕ ಸಂಗತಿಗಳು ಗೊತ್ತಾಗಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಕಾಸ ಟ್ರಸ್ಟ್, ಅಖಿಲ ಭಾರತ ಸಾಹಿತ್ಯ ಪರಿಷತ್ ಹಾಗೂ ಸಂಸ್ಕಾರ ಭಾರತೀ ಇವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಎರಡೂ ಪುಸ್ತಕಗಳನ್ನು ಕುರಿತು ಉಪನ್ಯಾಸಕ ಕಾರ್ಕಳದ ಆದರ್ಶ ಗೋಖಲೆ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾಸಕ ಎಸ್.ಎನ್.ಚನ್ನಬಸಪ್ಪ ಪಾಲ್ಗೊಳ್ಳಲಿದ್ದು, ವಿಕಾಸ ಟ್ರಸ್ಟ್ ಅಧ್ಯಕ್ಷ ಬಿ.ಎ. ರಂಗನಾಥ್ ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೋತ್ಥಾನ ಬಳಗದ ಖಜಾಂಚಿ ಮಂಜುನಾಥ, ಸಂಚಾಲಕ ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT