ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣ್ಯ ಸೇವೆ ಮತ್ತಷ್ಟು ವಿಸ್ತರಣೆ: ನಾಳೆ ಭೂಮಿ ಪೂಜೆ

Last Updated 3 ಆಗಸ್ಟ್ 2020, 9:31 IST
ಅಕ್ಷರ ಗಾತ್ರ

ಶಿವಮೊಗ್ಗ: ರೋಗ ಪೀಡಿತರಆರೈಕೆಮಾಡುತ್ತಿರುವ ಗಾಜನೂರಿನ ಶರಣ್ಯ ಸಂಸ್ಥೆಯ ಸೇವೆಯನ್ನು ಮತ್ತಷ್ಟು ವಿಸ್ತರಿಸಲಾಗುತ್ತಿದೆ. ಆ.5ರಂದು ಸಂಜೆ 4ಕ್ಕೆವಿಶೇಷ ಸೇವಾ ವಾರ್ಡ್ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಂಸ್ಥೆ ಕಾರ್ಯದರ್ಶಿ ಡಿ.ಎಲ್.ಮಂಜುನಾಥ್ ಹೇಳಿದರು.

ಗಾಜನೂರು ಅಗ್ರಹಾರದ ಶರಣ್ಯ ಆರೈಕೆ ಕೇಂದ್ರದಲ್ಲಿ ನಿರ್ಮಾಣವಾಗುತ್ತಿರುವ ಈ ವಿಶೇಷ ಸೇವೆಯ ವಾರ್ಡ್‌ಗಳ ಸಂಕೀರ್ಣ ಕಾರ್ಯಕ್ರಮದಲ್ಲಿಸಂಸ್ಥೆಯ ಗೌರವಾಧ್ಯಕ್ಷ ಡಿ.ಎಚ್.ಶಂಕರಮೂರ್ತಿ,ಜಿಲ್ಲಾ ಪಂಚಾಯಿತಿಸದಸ್ಯ ಕೆ.ಇ.ಕಾಂತೇಶ್, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಭಾಗವಹಿಸುವರು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಂಸ್ಥೆ 15 ವರ್ಷಗಳಿಂದ ಅಸಹಾಯಕರಿಗೆ, ಉಲ್ಬಣ ಸ್ಥಿತಿಯಲ್ಲಿರುವ ರೋಗ ಪೀಡಿತರಿಗೆ ಆರೈಕೆ, ಶುಶ್ರೂಷೆನೀಡುತ್ತಾ ಬಂದಿದೆ. ಈಗಾಗಲೇ 20 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೆ16 ರೋಗಿಗಳಿಗೆ ಅನುಕೂಲವಾಗುವಂತೆ ವಿಶೇಷ ವಾರ್ಡ್ ನಿರ್ಮಿಸಲಾಗುತ್ತಿದೆ. ರೋಗಿಗಳ ಜತೆ ಅವರನ್ನು ನೋಡಿಕೊಳ್ಳುವ ಒಬ್ಬರಿಗೆ ಅವಕಾಶ ನೀಡಲಾಗುವುದು. ರೋಗಿಯು ತನ್ನ ಕೊನೆಯ ದಿನಗಳಲ್ಲಿ ನೋವುರಹಿತಸಮಯ ಕಳೆಯಲುಅಲ್ಲಿ ಅವಕಾಶವಿದೆ.ಇಲ್ಲಿ ಎಲ್ಲ ರೀತಿಯ ಸೌಕರ್ಯಗಳಿವೆ. ಪ್ರತಿ ತಿಂಗಳು ₹ 4 ಲಕ್ಷಕ್ಕೂ ಹೆಚ್ಚು ಖರ್ಚು ಬರುತ್ತಿದೆಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಶ್ವತ್ಥ ನಾರಾಯಣಶೆಟ್ಟಿ, ಸಂದೇಶ್, ಡಿ.ಕೆ.ರಾಮನಾಥ್, ಶ್ರೀನಿವಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT