ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ನಟ ದರ್ಶನ್‌ಗೆ ಕಠಿಣ ಶಿಕ್ಷೆ ವಿಧಿಸಿ: ಜಂಗಮ ಸಮಾಜ ಆಗ್ರಹ

-
Published 12 ಜೂನ್ 2024, 14:37 IST
Last Updated 12 ಜೂನ್ 2024, 14:37 IST
ಅಕ್ಷರ ಗಾತ್ರ

ಶಿವಮೊಗ್ಗ : ಜಂಗಮ ಸಮಾಜದ ರೇಣುಕಸ್ವಾಮಿ ಅವರ ಕೊಲೆಗೆ ಸಂಬಂಧಿಸಿದಂತೆ ನಟ ದರ್ಶನ್ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾ ಜಂಗಮ ಸಮಾಜ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಬಳಗದ ಸದಸ್ಯ ಆಗಿದ್ದರು. ದರ್ಶನ್ ತನ್ನ ಅಭಿಮಾನಿಗಳ ಮುಖಾಂತರ ಅವರನ್ನು ಬೆಂಗಳೂರಿಗೆ ಕರೆಸಿಕೊಂಡು ಚಿತ್ರಹಿಂಸೆ ನೀಡಿ ಹೊಡೆದು ಸಾಯಿಸಿರುವುದು ರಾಕ್ಷಸ ಪ್ರವೃತ್ತಿ. ಚಲನಚಿತ್ರದಲ್ಲಿ ನೀತಿಪಾತ್ರಗಳನ್ನು ನಿರ್ವಹಿಸಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಇಂತಹ ಗೋಮುಖ ವ್ಯಾಘ್ರ ನಟರು ಮಾಡಿರುವ ಕೃತ್ಯವನ್ನು ರಾಜ್ಯದ ಜಂಗಮ ಸಮಾಜದವರು ಖಂಡಿಸುತ್ತಾರೆ ಎಂದರು.

ಅವರೊಡನೆ ಚಿತ್ರಹಿಂಸೆ ನೀಡಿ ಕೊಲೆಗೆ ಸಹಕರಿಸಿದ ಎಲ್ಲರಿಗೂ ಘೋರಶಿಕ್ಷೆ ವಿಧಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪ್ರಧಾನ ಕಾರ್ಯದರ್ಶಿ ಸೋಮನಾಥ ಕೆ.ಆರ್., ಉಪಾಧ್ಯಕ್ಷ ಟಿ.ಬಿ. ಸೋಮಶೇಖರಯ್ಯ, ಸುಜಯ ಪ್ರಸಾದ್, ಖಜಾಂಚಿ ಉಮೇಶ್ ಹಿರೇಮಠ, ಪರಮೇಶ್ವರಯ್ಯ ಟಿ.ಬಿ.ಮಲ್ಲಿಕಾರ್ಜುನಯ್ಯ, ವಿರಸಂಗಯ್ಯ, ತಾಲ್ಲೂಕು ಅಧ್ಯಕ್ಷ ಲೋಕೇಶ್ ದೊಡ್ಡಮಠ, ಕಾರ್ಯದರ್ಶಿ ಜಗದೀಶ್ವರಯ್ಯ ಮುದವಾಲ, ಖಜಾಂಚಿ ಬಸಯ್ಯ, ಮಹೆಶ್, ಆನಂದಯ್ಯ, ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿ ರಶ್ಮಿ, ಆರತಿ, ಉಮಾ ದೇವಿ, ತೇಜಸ್ವಿನಿ, ಗಿರಿಜಮ್ಮ, ಗೀತಾ ಮತ್ತೋಡು, ವಿಜಯಾಂಬಿಕ, ಅನ್ನಪೂರ್ಣಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT