ಶಿವಮೊಗ್ಗ: ಕಾಮಗಾರಿ ವಿಳಂಬದ ಪರಿಣಾಮ ವಿನೋಬನಗರ 100 ಅಡಿ ರಸ್ತೆದೂಳುಮಯವಾಗಿದೆ.ಈ ಭಾಗದ ಜನರು ಶ್ವಾಸಕೋಶಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಆರೋಪಿಸಿನಾಗರಿಕರು ಶುಕ್ರವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

‘ಸ್ಮಾರ್ಟ್ಸಿಟಿ’ ಹೆಸರಿನಲ್ಲಿ ನಗರದಎಲ್ಲೆಡೆ ಕಾಮಗಾರಿಗಳು ನಡೆಯುತ್ತಿವೆ. ಅವೈಜ್ಞಾನಿಕ ಕಾಮಗಾರಿ ಪರಿಣಾಮ ಈ ಭಾಗದಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ. ಶಿಕಾರಿಪುರ, ಹೊನ್ನಾಳಿಭಾಗದಬಸ್ಗಳು ಇದೇ ಮಾರ್ಗದಲ್ಲಿ ಸಾಗುತ್ತವೆ.ಇದರಿಂದಾಗಿ ವಾಹನ ಮತ್ತು ಜನಸಂಚಾರ ದಟ್ಟವಾಗಿದೆ.ಎಲ್ಲರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆಎಂದು ಆರೋಪಿಸಿದರು.

ಸುತ್ತಮುತ್ತಲ ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳು ಹೆಚ್ಚಾಗಿವೆ. ವ್ಯವಹಾರಕ್ಕೂ ತೊಂದರೆಯಾಗಿದೆ. ಏಕಮುಖ ಸಂಚಾರ ಅಪಘಾತಗಳಿಗೆ ಕಾರಣವಾಗಿದೆ.ಸುಮಾರುಮೂರುತಿಂಗಳಿನಿಂದ ಕಾಮಗಾರಿ ನಡೆಯುತ್ತಿದೆ.ಸದ್ಯಕ್ಕೆ ಮುಗಿಯುವಲಕ್ಷಣ ಕಾಣುತ್ತಿಲ್ಲ.ನಿತ್ಯವೂಕಿರಿಕಿರಿಯಾಗುತ್ತಿದೆ ಎಂದು ದೂರಿದರು.

ಅಧಿಕಾರಿಗಳು ತಕ್ಷಣ ಕಾಮಗಾರಿ ಮುಗಿಸಬೇಕು. ಭಾರಿವಾಹನಗಳ ಸಂಚಾರಕ್ಕೆಬದಲಿ ಮಾರ್ಗ ಸೂಚಿಸಬೇಕು. ವಿನಾಕಾರಣ ವಿಳಂಬ ಮಾಡುತ್ತಿರುವ ಗುತ್ತಿಗೆದಾರನಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಹರೀಶ್, ಶರತ್, ಮೋಹನ್ ಕುಮಾರ್, ದೀಪಕ್, ಕುಮಾರ್ ಪ್ರತಿಭಟನೆಯ ನೇತೃತ್ವವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.