ಬುಧವಾರ, ಜುಲೈ 28, 2021
29 °C
ನಾಳೆಗೆ ಸಕಲ ಸಿದ್ಧತೆ, ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳು 18,799 , ಮಾಸ್ಕ್‌ ಕಡ್ಡಾಯ

ಪಿಯು ಪರೀಕ್ಷೆ: ಎಲ್ಲ ಕೇಂದ್ರಗಳಿಗೂ ಸ್ಕ್ಯಾನರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ದ್ವಿತೀಯ ಪಿಯು ಇಂಗ್ಲಿಷ್‌ ವಿಷಯದ ಪರೀಕ್ಷೆ ಜೂನ್‌ 18ರಂದು ನಡೆಯಲಿದೆ. ಎಲ್ಲಾ 33 ಪರೀಕ್ಷಾ ಕೇಂದ್ರಗಳಲ್ಲೂ ವಿದ್ಯಾರ್ಥಿಗಳ ದೇಹದ ತಾಪಮಾನ ಪರೀಕ್ಷಿಸಲು ತಲಾ ಎರಡು ಥರ್ಮಲ್ ಸ್ಕ್ಯಾನರ್ ಒದಗಿಸಲಾಗುತ್ತಿದೆ.

ಜಿಲ್ಲೆಯಲ್ಲಿ 18,799 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. 5 ಪರೀಕ್ಷಾ ಕೇಂದ್ರಗಳಲ್ಲಿ 900ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಎಲ್ಲ ಪರೀಕ್ಷಾ ಕೇಂದ್ರಗಳನ್ನೂ ಸ್ಯಾನಿಟೈಸಿಂಗ್ ಮಾಡಿ ಸ್ವಚ್ಛಗೊಳಿಸಲಾಗಿದೆ. ಅಂತರವಿರುವ ಪ್ರತ್ಯೇಕ ಕೊಠಡಿ ಮೀಸಲಿಡಲಾಗಿದೆ. ಇತರೆ ಜಿಲ್ಲೆಗಳಿಂದ 791 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಿಸಿಕೊಂಡು ಜಿಲ್ಲೆಗೆ ಬಂದಿದ್ದಾರೆ. ಹಾಗೆಯೇ, ಇಲ್ಲಿಂದ 372 ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ಹೋಗಿದ್ದಾರೆ.

ಆರೋಗ್ಯ ಇಲಾಖೆ ಇಬ್ಬರು ಸಿಬ್ಬಂದಿ ಹಾಜರಿದ್ದು ಆರೋಗ್ಯ ಪರಿಶೀಲಿಸುವರು. ಪರೀಕ್ಷಾ ಮೇಲ್ವಿಚಾರಕರು ಕಡ್ಡಾಯವಾಗಿ ಫೇಸ್ ಶೀಲ್ಡ್, ಎನ್ 95 ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಧರಿಸಿರಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷಾ ಕಿಟ್ ಇರುವಂತೆ ನೋಡಿಕೊಳ್ಳಲಾಗಿದೆ. 

‘ವಿದ್ಯಾರ್ಥಿಗಳು ಪಿಯು ವೆಬ್‌ಸೈಟ್‌ನಿಂದ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬೇಕು. ನೀರಿನ ಬಾಟಲ್‌ ತರಬೇಕು. ಮಾಸ್ಕ್‌ ಧರಿಸಬೇಕು. ಬೆಳಿಗ್ಗೆ 9ರ ಒಳಗೆ ಪರೀಕ್ಷಾ ಕೇಂದ್ರದಲ್ಲಿ ಇರಬೇಕು ಎಂದು ಸೂಚಿಸಿರುವುದಾಗಿ’ ಉಪ ನಿರ್ದೇಶಕ ನಾಗರಾಜ್ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.