ತೀರ್ಥಹಳ್ಳಿ: ಮಹಿಷಿ– ದಬ್ಬಣಗದ್ದೆ ಮಾರ್ಗವಾಗಿ ತೀರ್ಥಹಳ್ಳಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಪಿಕಪ್ ವಾಹನಕ್ಕೆ ಬೈನೆಸರ ಸಮೀಪ ಮುಖಾಮುಖಿ ಡಿಕ್ಕಿಯಾಗಿದ್ದು, ಪಿಕಪ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ.
ಮಹಿಷಿ– ದಬ್ಬಣಗದ್ದೆ ಮಾರ್ಗದ ಲೋಕೋಪಯೋಗಿ ಇಲಾಖೆ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಜೆಜೆಎಂ ಕಾಮಗಾರಿ ಮಾಡಲಾಗಿದೆ. ಗುಂಡಿ ಮುಚ್ಚುವಾಗ ಜಾಗ್ರತೆ ವಹಿಸಿಲ್ಲ. ಅಲ್ಲದೇ ರಸ್ತೆಯ ಪಕ್ಕದ ದಂಡೆ ಮಳೆಯಿಂದ ಕೊಚ್ಚಿ ಹೋಗಿರುವುದರಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ದೂರುತ್ತಾರೆ.