ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿಗೆ ₹ 325 ಕೋಟಿ: ಬಿ.ವೈ. ರಾಘವೇಂದ್ರ

ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ: ಸಂಸದ ಬಿ.ವೈ. ರಾಘವೇಂದ್ರ ಭರವಸೆ
Last Updated 27 ನವೆಂಬರ್ 2020, 14:52 IST
ಅಕ್ಷರ ಗಾತ್ರ

ಹೊಸನಗರ: ರಾಣೇಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಮೊದಲನೆ ಹಂತದ ಅಭಿವೃದ್ಧಿಗೆ ₹ 325 ಕೋಟಿ ಅನುದಾನ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ತಾಲ್ಲೂಕಿನ ನಗರದ ‌ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿಯಿಂದ ಬೈಂದೂರು, ಕೊಲ್ಲೂರು, ನಿಟ್ಟೂರು, ನಗರ, ಹೊಸನಗರ, ಬಟ್ಟೆಮಲ್ಲಪ್ಪ ಸೇರಿ ಬಹುತೇಕ ನಗರಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಸೇತುವೆ ಹಣ ಮಂಜೂರು:

ಸಿಗಂದೂರಿನ ಐತಿಹಾಸಿಕ ಸೇತುವೆ ಜೊತೆಗೆ ಬೆಕ್ಕೋಡಿ ಸೇತುವೆ ನಿರ್ಮಾಣಕ್ಕೂ ₹ 120 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲದೆ ಮಡೋಡಿ, ಚಿಕ್ಕಪೇಟೆ, ಮತ್ತಿಮನೆ, ಕಾರಣಗಿರಿ, ಅರೋಡಿ ಸೇರಿ 7 ಸೇತುವೆಗಳ ನಿರ್ಮಾಣಕ್ಕೆ ಆಧ್ಯತೆ ನೀಡಲಾಗಿದೆ. ಪಿಎಂಜಿಎಸ್‌ವೈ ಯೋಜನೆಯಡಿ ಜಿಲ್ಲೆಗೆ ₹ 14 ಕೋಟಿ ಅನುದಾನವನ್ನು ತರಲಾಗಿದೆ ಎಂದು ಹೇಳಿದರು.

ಬಿದನೂರು ಕೋಟೆ ಅಭಿವೃದ್ಧಿಗೆ ₹ 1 ಕೋಟಿ:

ತಾಲ್ಲೂಕಿನ ಐತಿಹಾಸಿಕ ಬಿದನೂರು ಕೋಟೆ ಅಭಿವೃದ್ಧಿಗೆ ಒಂದು ವರ್ಷದ ಹಿಂದೆಯೇ ಒಂದು ಕೋಟಿ ಹಣವನ್ನು ಇಡಲಾಗಿದೆ. ಅಭಿವೃದ್ಧಿಯ ಬಗ್ಗೆ ಸ್ಥಳೀಯರ ಬೇಡಿಕೆ ಮತ್ತು ಮಾಹಿತಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾಚೇನಹಳ್ಳಿ 100 ಎಕರೆ ಪ್ರದೇಶದಲ್ಲಿ ಆಹಾರ ಮತ್ತು ಸಾಂಬಾರು ಬೆಳೆ ಪಾರ್ಕ್‌:

ಮೆಣಸು, ಅರಶಿಣ, ಶುಂಠಿ, ಏಲಕ್ಕಿ ಸೇರಿ ಹಲವು ಉಪ ಬೆಳೆಗಳನ್ನು ರೈತರು ಬೆಳೆಯುತ್ತಿದ್ದು, ಅವುಗಳಿಗೆ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ ಶಿವಮೊಗ್ಗದ ಮಾಚೇನಹಳ್ಳಿ ಮದ್ಯದ 100 ಎಕರೆ ಪ್ರದೇಶದಲ್ಲಿ ಆಹಾರ ಮತ್ತು ಸಾಂಬಾರು ಬೆಳೆ ಪಾರ್ಕ್‌ ನಿ‌‌ರ್ಮಿಸಲು ಉದ್ದೇಶಿಸಲಾಗಿದೆ. ಕೇರಳಕ್ಕೆ ಹೋಗುತ್ತಿದ್ದ ಅನುದಾನವನ್ನು ರಾಜ್ಯಕ್ಕೆ ತಂದು ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸಲು ಪ್ರಯತ್ನ ನಡೆದಿದೆ ಎಂದು ಸಂಸದರು ವಿವರಿಸಿದರು.

ಕೊಡಚಾದ್ರಿ–ಕೊಲ್ಲೂರು ಕೇಬಲ್ ಯೋಜನೆ ಯಶಸ್ವಿಯಾಗಿ ಸಾಕಾರಗೊಂಡಲ್ಲಿ ತಾಲ್ಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಚಿತ್ರಣವೇ ಬದಲಾಗುತ್ತದೆ. ಪಟ್ಟಣದ ಅಭಿವೃದ್ಧಿಯೂ ಆಗುತ್ತದೆ ಎಂದರು.

ನಗರ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಎನ್.ವೈ. ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್ ಸ್ವಾಮಿರಾವ್, ಮ್ಯಾಮ್ಕೋಸ್ ಸದಸ್ಯ ಕೆ.ವಿ. ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ವಿ. ಸುಬ್ರಹ್ಮಣ್ಯ, ಅಶ್ವಿನಿ ರಾಜೇಶ್, ಪ್ರಮುಖರಾದ ಎ.ವಿ. ಮಲ್ಲಿಕಾರ್ಜುನ್‌, ಬಂಕ್ರೀಬೀಡು ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT