ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಇ ಶುಲ್ಕದ ಬಾಕಿ ₨ 10 ಕೋಟಿ

ತಕ್ಷಣ ಬಿಡುಗಡೆಗೆ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್ ಆಗ್ರಹ
Last Updated 29 ಮೇ 2020, 14:06 IST
ಅಕ್ಷರ ಗಾತ್ರ

ಶಿವಮೊಗ್ಗ: ಖಾಸಗಿ ಶಾಲೆಗಳಿಗೆ ನೀಡಬೇಕಿರುವಆರ್‌ಟಿಇಶುಲ್ಕದ ಬಾಕಿಯನ್ನುಸರ್ಕಾರಶೀಘ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಪಾಲಿಕೆ ವಿರೋಧ ಪಕ್ಷದ ನಾಯಕ ಎಚ್.ಸಿ.ಯೋಗೀಶ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರುಶುಕ್ರವಾರಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಶಿಕ್ಷಣ ಹಕ್ಕು ಕಾಯ್ದೆಯ ಮೂಲಕಜಿಲ್ಲೆಯ ವಿವಿಧ ಖಾಸಗಿ ಶಾಲೆಗಳಲ್ಲಿ ಮಕ್ಕಳು ದಾಖಲಾತಿ ಪಡೆದಿದ್ದಾರೆ.ಸರ್ಕಾರವೇ ಈ ಶುಲ್ಕಪಾವತಿಸಬೇಕಿದೆ. 2018-19 ಹಾಗೂ2019-20ರಲ್ಲಿ ಜಿಲ್ಲೆಯ 269 ಶಾಲೆಗಳಿಗೆ 10,800 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 2018–19ರಲ್ಲಿ 4.35 ಲಕ್ಷ, 2019–20ನೇ ಸಾಲಿನಲ್ಲಿ ₨ 9.08ಕೋಟಿಬಾಕಿ ಇದೆ. ಈಗಾಗಲೇ ಶಾಲೆಗಳು ಮುಚ್ಚಿದ್ದರೂ ಶಿಕ್ಷಕರಿಗೆ, ಸಿಬ್ಬಂದಿಗೆ, ವಾಹನ ಚಾಲಕರಿಗೆ ವೇತನ ನೀಡಬೇಕಿದೆ.ಖಾಸಗಿ ಶಾಲೆಗಳು ಈಗ ಸಂಕಷ್ಟದಲ್ಲಿವೆ. ಹಾಗಾಗಿ,ತಕ್ಷಣ ಹಣ ಬಿಡುಗಡೆ ಮಾಡಬೇಕು ಎಂದುಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯಸರ್ಕಾರಗಳುಲಾಕ್‌ಡೌನ್‌ಪರಿಸ್ಥಿತಿಯಲ್ಲಿ ಎಲ್ಲ ವರ್ಗಗಳಿಗೂ ನೆರವು ನೀಡುತ್ತಿವೆ.ವಿವಿಧ ಯೋಜನೆಗಳಮೂಲಕ ಹಣ ಬಿಡುಗಡೆ ಮಾಡಿವೆ. ಕೇಂದ್ರ ಸರ್ಕಾರ ₨ 20 ಲಕ್ಷ ಕೋಟಿ ನೆರವು ಘೋಷಿಸಿದೆ.ಆದರೆ, ಶಿಕ್ಷಣ ಕ್ಷೇತ್ರಕ್ಕೆಇದುವರೆಗೂ ಯಾವ ಪ್ಯಾಕೇಜ್‌ ಸಹಘೋಷಿಸಿಲ್ಲ. ನೆರವು ನೀಡುವುದಿರಲಿ,ಶಾಲೆಗಳಿಗೆ ಬರಬೇಕಾದ ಬಾಕಿ ಹಣವನ್ನಾದರೂಬಿಡುಗಡೆ ಮಾಡುವ ಮೂಲಕ ನೆರವಾಗಬೇಕು. ಇಲ್ಲದಿದ್ದರೆ ಪೋಷಕರಿಗೆ ಶುಲ್ಕಕಟ್ಟಿ ಎಂದು ಸಂದೇಶ ಕಳುಹಿಸುವಸನ್ನಿವೇಶ ನಿರ್ಮಾಣವಾಗಬಹುದು. ಇದರಿಂದ ಪೋಷಕರು ಆತಂಕಕ್ಕೆ ಒಳಗಾಗುತ್ತಾರೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ದೇವೇಂದ್ರಪ್ಪ ಮತ್ತಿತರರು ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT