ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ರಸ್ತೆ, ನಿರ್ಮಿತಿ ಕೇಂದ್ರದ ಕಾಮಗಾರಿಗಳಿಗೆ ಒತ್ತು

Last Updated 19 ನವೆಂಬರ್ 2021, 7:06 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಮೂಲಕ ಬಂದಿರುವ ಹಣವನ್ನು ಗ್ರಾಮೀಣ ರಸ್ತೆ ಹಾಗೂ ನಿರ್ಮಿತಿ ಕೇಂದ್ರದ ಮೂಲಕ ಕೈಗೊಳ್ಳುವ ಕಾಮಗಾರಿಗಳಿಗೆ ಬಳಸಲು ಒತ್ತು ನೀಡಲಾಗಿದೆ.

ಶಾಸಕರ ನಿಧಿಯಿಂದ ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ 2018-19, 2019-20ನೇ ಸಾಲಿನಲ್ಲಿ ತಲಾ ₹ 2 ಕೋಟಿ ಬಿಡುಗಡೆಯಾಗಿದ್ದು, ಅಷ್ಟೂ ಹಣವನ್ನು ಖರ್ಚು ಮಾಡಲಾಗಿದೆ. 2020-21ನೇ ಸಾಲಿನಲ್ಲಿ ₹ 2 ಕೋಟಿ ಪೈಕಿ 52.75 ಲಕ್ಷ ಖರ್ಚಾಗಿದ್ದು, ಉಳಿದ ಹಣಕ್ಕೆ ಕ್ರಿಯಾಯೋಜನೆ ಸಿದ್ಧವಾಗಿದೆ.

2018–19ನೇ ಸಾಲಿನಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ₹ 74.40 ಲಕ್ಷ ಖರ್ಚು ಮಾಡಲಾಗಿದೆ. ನಿರ್ಮಿತಿ ಕೇಂದ್ರದ ಮೂಲಕ ₹ 1.17 ಕೋಟಿ ವೆಚ್ಚದಲ್ಲಿ ಅಡಿಕೆ ಸುಲಿಯುವ ಕೊಠಡಿ, ಪ್ರಯಾಣಿಕರ ತಂಗುದಾಣ, ಸಮುದಾಯ ಭವನ ನಿರ್ಮಿಸಲಾಗಿದೆ. ಹೈಮಾಸ್ಟ್‌ ದೀಪದ ಅಳವಡಿಕೆ, ಬೇದೂರು, ಪಡವಗೋಡು ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ಕ್ಲಾಸ್ ಆರಂಭಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಮೂಲಕ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲು ₹ 8.40 ಲಕ್ಷ ವ್ಯಯಿಸಲಾಗಿದೆ.

2019–20ರಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ಗ್ರಾಮೀಣ ರಸ್ತೆಗಾಗಿ ₹ 62.70 ಲಕ್ಷ ಖರ್ಚು ಮಾಡಲಾಗಿದೆ. ₹ 125.50 ಲಕ್ಷ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ಮೂಲಕ ಸಾರ್ವಜನಿಕ ಸಮುದಾಯ ಭವನ, ಪ್ರಯಾಣಿಕರ ತಂಗುದಾಣ, ಅಡಿಕೆ ಸುಲಿಯುವ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಲು, ಸ್ಮಾರ್ಟ್‌ಕ್ಲಾಸ್‌ಗಾಗಿ ₹ 11.80 ಲಕ್ಷ ವಿನಿಯೋಗಿಸಲಾಗಿದೆ.

2020-21ನೇ ಸಾಲಿನಲ್ಲಿ ಕೋವಿಡ್ ಕಾರಣ ₹ 2 ಕೋಟಿ ಅನುದಾನದ ಪೈಕಿ ಈವರೆಗೆ ₹ 52.75 ಲಕ್ಷ ಮಾತ್ರ ಖರ್ಚು ಮಾಡಲಾಗಿದೆ. ಉಳಿದ ಹಣಕ್ಕೆ ಕ್ರಿಯಾಯೋಜನೆ ಸಿದ್ಧವಾಗಿದೆ.

ಈ ಸಾಲಿನಲ್ಲಿ ನಗರದ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್‌ಗೆ ಪೈಪ್‌ಲೈನ್‌ ಅಳವಡಿಸಲು ₹ 8 ಲಕ್ಷ, ಆಸ್ಪತ್ರೆಯ ಚಾವಣಿ ಕಾಮಗಾರಿಗೆ ₹ 11 ಲಕ್ಷ, ಆರೈಕೆ ಕೇಂದ್ರದ ನೆಲಹಾಸು ನಿರ್ಮಾಣಕ್ಕೆ ₹ 14 ಲಕ್ಷ ಸೇರಿ ಕೋವಿಡ್ ನಿರ್ವಹಣೆಗಾಗಿ ₹ 33 ಲಕ್ಷ ಖರ್ಚು ಮಾಡಲಾಗಿದೆ.

ಗ್ರಾಮೀಣ ರಸ್ತೆಗಾಗಿ ₹ 10 ಲಕ್ಷ ವಿನಿಯೋಗಿಸಲಾಗಿದೆ. ಕರೂರು–ಭಾರಂಗಿ ಹೋಬಳಿಯಲ್ಲಿ ಮೊಬೈಲ್ ನೆಟ್‌ವರ್ಕ್‌ ಸಮಸ್ಯೆಗೆ ತಾತ್ಕಾಲಿಕ ಪರಿಹಾರಒದಗಿಸುವ ನಿಟ್ಟಿನಲ್ಲಿ ಆ ಭಾಗದ 17 ಸರ್ಕಾರಿ ಶಾಲೆಗಳಿಗೆ ಇಂಟರ್ ನೆಟ್ ಸೌಲಭ್ಯ ಕಲ್ಪಿಸಲು ₹ 9.75 ಲಕ್ಷ ಖರ್ಚು ಮಾಡಲಾಗುತ್ತಿದೆ.

***

ಶಾಸಕರ ನಿಧಿಯನ್ನು ರಸ್ತೆ ಮೊದಲಾದ ಕಾಮಗಾರಿಗಳಿಗಿಂತ ಶಾಲಾ–ಕಾಲೇಜುಗಳಿಗೆ ವಿನಿಯೋಗಿಸುವುದು ಸೂಕ್ತ ಎನಿಸುತ್ತಿದೆ. ಈ ಮೂಲಕ ಶಾಲಾ ಕಾಲೇಜುಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜುಗಳಿಗೆ ಪ್ರಾಮುಖ್ಯ ನೀಡಲಾಗುವುದು.

ಎಚ್. ಹಾಲಪ್ಪ ಹರತಾಳು, ಶಾಸಕರು, ಸಾಗರ ವಿಧಾನಸಭಾ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT