ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಕ್ತಿ ಸಾಗರ ಸಂಗಮ ಸಮಾವೇಶ: ಮಲೆನಾಡು ದೀವರ ಪ್ರತಿಷ್ಠಾನದ ಬೆಂಬಲ

Published 4 ಮಾರ್ಚ್ 2024, 16:32 IST
Last Updated 4 ಮಾರ್ಚ್ 2024, 16:32 IST
ಅಕ್ಷರ ಗಾತ್ರ

ಸಾಗರ: ಮಾ. 5ರಂದು ನಡೆಯಲಿರುವ 'ಶಕ್ತಿ ಸಾಗರ ಸಂಗಮ" ಸಮಾವೇಶಕ್ಕೆ ಮಲೆನಾಡು ದೀವರ ಪ್ರತಿಷ್ಠಾನ ಬೆಂಬಲ ಸೂಚಿಸಿದೆ.

ಈಡಿಗ, ಬಿಲ್ಲವ, ನಾಮಧಾರಿ, ದೀವರು ಸೇರಿ 26 ಉಪ ಪಂಗಡಗಳ ವತಿಯಿಂದ ನಡೆಯುತ್ತಿರುವ ಸಮಾವೇಶ ಪಕ್ಷಾತೀತವಾಗಿದೆ. ಈ ಹಿನ್ನಲೆಯಲ್ಲಿ ನಮ್ಮ ಪ್ರತಿಷ್ಠಾನ ಸಮಾವೇಶಕ್ಕೆ ಬೆಂಬಲ ಸೂಚಿಸಿದೆ ಎಂದು ಪ್ರತಿಷ್ಠಾನದ ಪ್ರಮುಖರಾದ ಜಿ.ಕೆ.ಭೈರಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಡಿಗ ಹಾಗೂ ಅದರ ಉಪ ಪಂಗಡಗಳಿಗೆ ಬಿ.ಎಸ್.ಯಡಿಯೂರಪ್ಪ ಅವರು ಗಣನೀಯ ಕೊಡುಗೆ ನೀಡಿದ್ದು, ಅವರನ್ನು ಸನ್ಮಾನಿಸುವುದು ಕರ್ತವ್ಯ ಎಂದು ಸಾಮಾಜಿಕ ಕಾರ್ಯಕರ್ತ ಕೊಟ್ರಪ್ಪ ಎಂ. ನೇದರವಳ್ಳಿ ಹೇಳಿದರು.

ಪ್ರಮುಖರಾದ ಗೋಪಾಲ ಬೆಳಲಮಕ್ಕಿ, ಗಣಪತಿ ಬರದವಳ್ಳಿ, ನಾರಾಯಣ, ಜನಾರ್ದನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT