ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಜಿಲ್ಲೆಯ 38 ಶಿಕ್ಷಕರಿಗೆ ಪ್ರಶಸ್ತಿಯ ಗರಿ

ಶಿಕ್ಷಕರ ದಿನಾಚರಣೆ: ಜಿಲ್ಲಾಡಳಿತದಿಂದ ಅತ್ಯುತ್ತಮ ಶಿಕ್ಷಕರು, ವಿಶೇಷ ಶಿಕ್ಷಕ ಪ್ರಶಸ್ತಿ ಪ್ರಕಟ
Published 4 ಸೆಪ್ಟೆಂಬರ್ 2024, 14:20 IST
Last Updated 4 ಸೆಪ್ಟೆಂಬರ್ 2024, 14:20 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿಕ್ಷಕರ ದಿನಾಚರಣೆಯ ಮುನ್ನಾ ದಿನ ಬುಧವಾರ ಶಿವಮೊಗ್ಗ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಂದ ತಲಾ ಏಳು ಹಾಗೂ ಪ್ರೌಢಶಾಲೆಯಿಂದ ಏಳು ಸೇರಿದಂತೆ ಒಟ್ಟು 21 ಶಿಕ್ಷಕರನ್ನು ಜಿಲ್ಲಾಡಳಿತ ಆಯ್ಕೆ ಮಾಡಿದೆ. 17 ಶಿಕ್ಷಕರು ಜಿಲ್ಲಾ ಮಟ್ಟದ ವಿಶೇಷ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಿರಿಯ ಪ್ರಾಥಮಿಕ ಶಾಲಾ ವಿಭಾಗ:

ಹೊಸನಗರ ತಾಲ್ಲೂಕಿನ ಹಾರಂಬಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಎಚ್‌. ಮೋಹನ್ ಕುಮಾರ್, ಭದ್ರಾವತಿ ತಾಲ್ಲೂಕಿನ ಕನ್ನೆಕೊಪ್ಪದ ಎಚ್. ಬಸವರಾಜಪ್ಪ, ಶಿವಮೊಗ್ಗ ತಾಲ್ಲೂಕಿನ ದೇವಾಬಾಳು ಶಾಲೆಯ ಶಿಕ್ಷಕಿ ಸುಧಾ ಚಕ್ರಸಾಲಿ, ಸಾಗರ ತಾಲ್ಲೂಕಿನ ಮಂಕಳಲೆ ಶಾಲೆಯ ಶಿಕ್ಷಕ ಎಂ. ಈಶ್ವರಪ್ಪ, ಶಿಕಾರಿಪುರ ತಾಲ್ಲೂಕಿನ ಯರೇಕಟ್ಟೆ ಶಾಲೆಯ ಸಹ ಶಿಕ್ಷಕ ನಿತ್ಯಾನಂದ, ಸೊರಬ ತಾಲ್ಲೂಕಿನ ಉಪ್ಪಳ್ಳಿ ಶಾಲೆಯ ಆರ್. ಪಾಲಾನಾಯ್ಕ, ತೀರ್ಥಹಳ್ಳಿ ತಾಲ್ಲೂಕಿನ ಅರೇಹಳ್ಳಿ ಶಾಲೆಯ ಶಿಕ್ಷಕ ಆರ್.ಎ. ನಾಗರಾಜ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ:

ಹೊಸನಗರ ತಾಲ್ಲೂಕಿನ ಸಮಟಗರು ಶಾಲೆಯ ಶಿಕ್ಷಕಿ ಅಂಬಿಕಾ ಲಕ್ಷ್ಮಣ್‌ರಾವ್ ಉಡುಪಿ, ಭದ್ರಾವತಿ ತಾಲ್ಲೂಕಿನ ಬಾಳೆಮಾರನಹಳ್ಳಿ ಶಾಲೆಯ ಮುಖ್ಯಶಿಕ್ಷಕಿ ಎನ್. ಪಾರ್ವತಮ್ಮ, ತೀರ್ಥಹಳ್ಳಿ ತಾಲ್ಲೂಕಿನ ಕುಕ್ಕನಕೊಡಿಗೆ ಶಾಲೆಯ ಸಹ ಶಿಕ್ಷಕ ಗಣೇಶ ನಾಯ್ಕ, ಶಿವಮೊಗ್ಗದ ನ್ಯೂಮಂಡ್ಲಿ ಸರ್ಕಾರಿ ಉರ್ದು ಶಾಲೆ ಶಿಕ್ಷಕಿ ರುಕ್ಸಾನ ಬೇಗಂ, ಸಾಗರ ತಾಲ್ಲೂಕಿನ ಎಡಜಿಗಳೆಮನೆಯ ಶಿಕ್ಷಕ ಸತ್ಯನಾರಾಯಣ, ಶಿಕಾರಿಪುರ ತಾಲ್ಲೂಕಿನ ಚುರ್ಚಿಗುಂಡಿ ಶಾಲೆಯ ಬಡ್ತಿ ಮುಖ್ಯಶಿಕ್ಷಕಿ ಎಂ.ಎನ್. ಕಮಲಮ್ಮ, ಸೊರಬ ತಾಲ್ಲೂಕಿನ ತಲಗಡ್ಡೆ ಶಾಲೆಯ ಶಿಕ್ಷಕ ಎನ್‌.ಶಿವಕುಮಾರ.

ಪ್ರೌಢಶಾಲಾ ಶಾಲಾ ವಿಭಾಗ:

ಹೊಸನಗರ ತಾಲ್ಲೂಕಿನ ಸೊನಲೆ ಶಾಲೆಯ ಶಿಕ್ಷಕ ಶ್ರೀಮೂರ್ತಿ, ಭದ್ರಾವತಿ ತಾಲ್ಲೂಕಿನ ಅರಳಿಹಳ್ಳಿ ಶಾಲೆಯ ಎಂ. ದಿವಾಕರ, ತೀರ್ಥಹಳ್ಳಿ ತಾಲ್ಲೂಕಿನ ಅರೆನಲ್ಲಿ ತಿಪ್ಪೇಸ್ವಾಮಿ ಶಾಲೆಯ ಶಿಕ್ಷಕ ಡಿ.ರೇವಣಪ್ಪ, ಶಿವಮೊಗ್ಗ ತಾಲ್ಲೂಕಿನ ಶೆಟ್ಟಿಕೆರೆ ಶಾಲೆಯ ಶಿಕ್ಷಕ ಚನ್ನಬಸಪ್ಪ ನ್ಯಾಮತಿ, ಸಾಗರ ತಾಲ್ಲೂಕಿನ ಹಿರೇನೆಲ್ಲೂರು ಶಾಲೆಯ ಶಿಕ್ಷಕ ಜಿ.ಈರೇಶ, ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಎಂ.ನಾಗರಾಜ ನಾಯ್ಕ, ಸೊರಬ ತಾಲ್ಲೂಕಿನ ಚಿಟ್ಟೂರು ಶಾಲೆಯ ಶಿಕ್ಷಕ ಎಚ್. ನಾಗರಾಜಪ್ಪ.

ವಿಶೇಷ ಶಿಕ್ಷಕ ಪ್ರಶಸ್ತಿ ಪುರಸ್ಕೃತರು:

ಕಿರಿಯ ಪ್ರಾಥಮಿಕ ಶಾಲಾ ವಿಭಾಗ:

ಹೊಸನಗರ ತಾಲ್ಲೂಕಿನ ಗುಡ್ಡೇಕೊಪ್ಪ ಶಾಲೆ ಶಿಕ್ಷಕ ಬಿ.ಗಂಗಾಧರ, ಭದ್ರಾವತಿ ತಾಲ್ಲೂಕಿನ ಕಲ್ಲಿಹಾಳ್ ಶಾಲೆಯ ಶಿಕ್ಷಕಿ ಹೀನಾ ಕೌಸರ್, ಭದ್ರಾವತಿ ತಾಲ್ಲೂಕಿನ ಹೊಳೆಗಂಗೂರು ಶಾಲೆಯ ಶಿಕ್ಷಕಿ ಎಸ್‌. ಶಾರದಾ, ಶಿವಮೊಗ್ಗ ತಾಲ್ಲೂಕಿನ ಕಲ್ಲಾಪುರ ಶಾಲೆಯ ಶಿಕ್ಷಕಿ ಎಸ್‌.ಎಸ್‌.ಪದ್ಮಾವತಿ, ಶಿಕಾರಿಪುರ ತಾಲ್ಲೂಕಿನ ತರಲಘಟ್ಟ ಶಾಲೆಯ ಶಿಕ್ಷಕ ಎನ್. ರಮೇಶ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ:

ಹೊಸನಗರ ತಾಲ್ಲೂಕಿನ ಜೇನಿ ಗ್ರಾಮದ ಶಿಕ್ಷಕ ಡಿ.ಶಂಕರಪ್ಪ, ಭದ್ರಾವತಿ ತಾಲ್ಲೂಕಿನ ಇಟ್ಟಿಗೆಹಳ್ಳಿ ಶಾಲೆಯ ಬಡ್ತಿ ಮುಖ್ಯಶಿಕ್ಷಕ ರಂಗಪ್ಪ, ಭದ್ರಾವತಿ ತಾಲ್ಲೂಕಿನ ಕಡದಕಟ್ಟೆಯ ನವಚೇತನ ಅನುದಾನಿತ ಕನ್ನಡ ಶಾಲೆ ಶಿಕ್ಷಕ ಸಿ.ಎಚ್. ನಾಗೇಂದ್ರಪ್ಪ, ಸೊರಬ ತಾಲ್ಲೂಕಿನ ತಿಮ್ಮಾಪುರ ಶಾಲೆಯ ಬಡ್ತಿ ಮುಖ್ಯಶಿಕ್ಷಕ ಟಿ. ಸುಧಾಮಣಿ, ಶಿವಮೊಗ್ಗ ತಾಲ್ಲೂಕಿನ ವಡ್ಡಿನಕೊಪ್ಪ ಶಾಲೆಯ ಶಿಕ್ಷಕಿ ಎಂ.ತ್ರಿವೇಣಿ, ಬೊಮ್ಮನಕಟ್ಟೆ ಶಾಲೆಯ ಶಿಕ್ಷಕಿ ಶೈಲಶ್ರೀ, ಶಿಕಾರಿಪುರ ತಾಲ್ಲೂಕಿನ ಕವುಲಿ ಶಾಲೆಯ ಶಿಕ್ಷಕ ಆರ್.ಎಂ. ಘಾಸಿ, ಶಿರಾಳಕೊಪ್ಪದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸುರೇಶ ಅರ್ಕಚಾರ್, ಸೊರಬ ತಾಲ್ಲೂಕಿನ ನೇರಲಿಗೆ ಶಾಲೆಯ ಫಾಲಾಕ್ಷಪ್ಪ ಬಾವೇರ.

ಪ್ರೌಢಶಾಲಾ ಶಾಲಾ ವಿಭಾಗ:

ಹೊಸನಗರ ತಾಲ್ಲೂಕಿನ ನಿಟ್ಟೂರು ಶಾಲೆ ಶಿಕ್ಷಕ ಕಮರುಲ್ಲಾ, ಭದ್ರಾವತಿ ತಾಲ್ಲೂಕಿನ ಅರಳಿಹಳ್ಳಿ ಉರ್ದು ಶಾಲೆ ಶಿಕ್ಷಕ ಎನ್‌.ಪರಶುರಾಮ, ತೀರ್ಥಹಳ್ಳಿ ತಾಲ್ಲೂಕಿನ ತನಿಕಲ್ ಶಾಲೆಯ ಶಿಕ್ಷಕ ವಿನಾಯಕ ನಾಯ್ಕ, ಶಿವಮೊಗ್ಗ ತಾಲ್ಲೂಕಿನ ಉಂಬಳೇಬೈಲ್ ಶಾಲೆಯ ಶಿಕ್ಷಕ ಜಿ. ಪ್ರಭಾಕರ, ಸಾಗರ ತಾಲ್ಲೂಕಿನ ಹುಲಿದೇವರಬನ ಶಾಲೆಯ ಶಿಕ್ಷಕ ಎಚ್.ಬಿ. ಗಣಪತಿ, ಶಿಕಾರಿಪುರ ತಾಲ್ಲೂಕಿನ ಹಾರೋಗೊಪ್ಪ ಶಾಲೆ ಶಿಕ್ಷಕಿ ಎಂ.ಪದ್ಮಾವತಿ, ಸೊರಬ ತಾಲ್ಲೂಕಿನ ಬಿಳವಾಣಿಯ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಶಿಕ್ಷಕ ಎಚ್‌.ಆರ್‌.ಈಶ್ವರಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT