ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ‌| ಅಂತರರಾಷ್ಟ್ರೀಯ ಯೋಗ ದಿನ: ಸರಳ ಆಚರಣೆಗೆ ನಿರ್ಧಾರ

Last Updated 19 ಜೂನ್ 2020, 11:09 IST
ಅಕ್ಷರ ಗಾತ್ರ

ಶಿವಮೊಗ್ಗ:ಜೂನ್‌ 21ರಂದು ಅತ್ಯಂತ ಸರಳವಾಗಿಅಂತರರಾಷ್ಟ್ರೀಯ ಯೋಗ ದಿನ ಆಚರಿಸಲು ಕೇಂದ್ರಸರ್ಕಾರ ಸೂಚಿಸಿದೆ. ಎಲ್ಲರೂತಮ್ಮ ಮನೆಗಳಲ್ಲೇ ಕುಟುಂಬದಸದಸ್ಯರ ಜತೆಗೂಡಿ ಆಚರಿಸಬೇಕು ಎಂದು ಹಿರಿಯ ಯೋಗ ಗುರು ಯು.ಆರ್.ಶ್ರೀನಿವಾಸ್ ಮೂರ್ತಿ ಮನವಿ ಮಾಡಿದರು.

5 ವರ್ಷಗಳಿಂದ ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ. ಈ ವರ್ಷ ಕೋವಿಡ್-19ರ ಸಂದಿಗ್ಧ ಪರಿಸ್ಥಿತಿಯಕಾರಣ ಸಾರ್ವಜನಿಕರು ಒಂದೆಡೆ ಸೇರಲುಅವಕಾಶವಿಲ್ಲ.ಈ ಬಾರಿ ‘ಕುಟುಂಬದೊಡನೆ ಯೋಗ' ಎಂಬ ಧ್ಯೇಯ ವಾಕ್ಯಪಾಲಿಸಲಾಗುವುದು.ಅಂದು ಬೆಳಿಗ್ಗೆ 6.30ರಿಂದ 7.30ರವರೆಗೆ ಸ್ಥಳೀಯ ವಾಹಿನಿ ಟಿವಿ ಭಾರತ್, ಫೇಸ್‌ಬುಕ್‌ನಲ್ಲಿ‌ ನೇರ ಪ್ರಸಾರವಾಗುತ್ತದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

1978ರಲ್ಲಿ ಆರಂಭವಾದ ಯೋಗ ಶಿಕ್ಷಣ ಸಮಿತಿ ಶಿವಮೊಗ್ಗ ನಗರದ 50 ಕೇಂದ್ರಗಳಲ್ಲಿ ಉಚಿತ ಯೋಗ ಶಿಕ್ಷಣನೀಡುತ್ತಿದೆ. ಶಿಕ್ಷಕರು ಉಚಿತ ತರಬೇತಿ ನೀಡುತ್ತಿದ್ದಾರೆ ಎಂದು ಸಮಿತಿಯ ನಿರ್ದೆಶಕ ಡಾ.ಕೆ.ಜಿ.ವೆಂಕಟೇಶ್ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎನ್.ಎಸ್.ರವೀಂದ್ರ, ಬಾಸು ಅರವಿಂದ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT