ಶಿವಮೊಗ್ಗ: ಇಲ್ಲಿನ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣದಿಂದ ನಿಗದಿತ ಮೊತ್ತವನ್ನು ಮುಂಗಡ ಪಾವತಿಸಿ (ಪ್ರೀ–ಪೇಯ್ಡ್) ಆಟೊದಲ್ಲಿ ಪ್ರಯಾಣಿಸುವ ಸಾರ್ವಜನಿಕರ ಬಹುದಿನದ ಕನಸು ಸೋಮವಾರ ನನಸಾಯಿತು.

ಸ್ವತಃ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಸ್ಪಿ ಬಿ.ನಿಖಿಲ್ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಒಟ್ಟಾಗಿ ಆಟೊದಲ್ಲಿ ಪ್ರಯಾಣಿಸಿ ಪ್ರೀ–ಪೇಯ್ಡ್ ಆಟೊ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದರು.

ಶಿವಮೊಗ್ಗದ ರೈಲು ನಿಲ್ದಾಣದಲ್ಲಿ ಪ್ರೀಪೇಯ್ಡ್ ಆಟೊ ವ್ಯವಸ್ಥೆ ಆರಂಭಿಸಿದ್ದರೂ ಅದು ಬಸ್ ನಿಲ್ದಾಣಗಳ ಬಳಿ ಜಾರಿಗೊಳ್ಳುವುದು ವಿಳಂಬವಾಗಿತ್ತು. ತಡರಾತ್ರಿ ಹಾಗೂ ಬೆಳಗಿನ ಜಾವ ಶಿವಮೊಗ್ಗಕ್ಕೆ ಬರುವ ಪ್ರಯಾಣಿಕರಿಗೆ ಇದರಿಂದ ತೀವ್ರ ಅನಾನುಕೂಲವಾಗಿತ್ತು. ಪ್ರಿ–ಪೇಯ್ಡ್ ಆಟೊ ವ್ಯವಸ್ಥೆ ಜಾರಿಯಿಂದ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.