ಇಂದು ಶಿರಾಳಕೊಪ್ಪ ಬಂದ್: ಶಾಂತಿ ಸಭೆ

ಶಿರಾಳಕೊಪ್ಪ: ಪಟ್ಟಣದಲ್ಲಿ ಸೋಮವಾರ ಹಿಂದೂ ಜಾಗರಣ ವೇದಿಕೆಯು ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿದ್ದರಿಂದ ಪೊಲೀಸರು ಎರಡೂ ಸಮುದಾಯದ ಪ್ರಮುಖರೊಂದಿಗೆ ಭಾನುವಾರ ಪ್ರತ್ಯೇಕವಾಗಿ ಶಾಂತಿ ಸಭೆ ನಡೆಸಿದರು.
‘ಹಿಂದೂ ಜಾಗರಣ ವೇದಿಕೆ ಹೊರಡಿಸಿರುವ ಭಿತ್ತಿಪತ್ರದ ಅಂಶಗಳು ಸತ್ಯಕ್ಕೆ ದೂರವಾಗಿವೆ. ಒಂದುವೇಳೆ ಅವು ನಿಜವಾಗಿದ್ದರೆ ಅವುಗಳನ್ನು ತೋರಿಸಿಕೊಡಬೇಕು. ವಿನಾಕಾರಣ ಸಮುದಾಯವನ್ನು ಆರೋಪಿತರನ್ನಾಗಿ ಮಾಡುವುದು ಸರಿಯಲ್ಲ’ ಎಂದು ಪಟ್ಟಣದ ಅಂಜುಮನ್ ಇಸ್ಲಾಂ ಕಮಿಟಿಯ ಸದಸ್ಯರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್‌ಕುಮಾರ್ ಎಸ್. ಭೂಮರೆಡ್ಡಿ, ‘ಹಿಂದೂ ಜಾಗರಣ ವೇದಿಕೆ ಬಂದ್ ಕುರಿತು ನಮ್ಮ ಬಳಿ ಯಾವುದೇ ಅನುಮತಿ ಪಡೆದಿಲ್ಲ. ಪ್ರತಿಭಟನೆ ಮಾಡಲು ಸಂವಿದಾನ ಬದ್ಧ ಹಕ್ಕಿದೆ. ಪ್ರತಿಭಟನೆಯ ವೇಳೆ ಪ್ರಚೋದನಕಾರಿ ಭಾಷಣ, ಅಹಿತಕರ ಘಟನೆ, ಬಲವಂತವಾಗಿ ಬಂದ್‌ಗೆ ಒತ್ತಾಯಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಭಿತ್ತಿ ಪತ್ರದಲ್ಲಿ ನಮೂದಿಸಿರುವ ಅಂಶಗಳ ಕುರಿತು ವಿವರ ಪಡೆಯಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯ ಜತೆಗೆ ಶಾಂತಿಯಿಂದ ಸಹಕರಿಸಿ’ ಎಂದರು.
ನಂತರದ ಹಿಂದೂ ಜಾಗರಣ ವೇದಿಕೆಯೊಂದಿಗೆ ನಡೆದ ಶಾಂತಿಸಭೆಯಲ್ಲಿ ಕಾರ್ಯಕರ್ತರು, ‘ಪೊಲೀಸರು ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿ ಮೊಕದ್ದಮೆ ದಾಖಲಿಸಿದ್ದಾರೆ. ಹಿಂದೂ ಯುವಕರ ಮೇಲೆ ದೌರ್ಜನ್ಯ ಎಸಗಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.
‘ನಾವು ಸ್ವಯಂ ಪ್ರೇರಿತ ಬಂದ್‌ಗೆ ಕರೆ ನೀಡಿದ್ದೇವೆ. ಯಾರ ಮೇಲೂ ಒತ್ತಡ ಹೇರಿಲ್ಲ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.