ಸಮಾಜದಲ್ಲಿನ ಅಂಕು- ಡೊಂಕುಗಳ ತಿದ್ದುತ್ತಾ ಸಮಾಜಕ್ಕಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟರು. ಇಂತಹ ಶರಣರ ವಚನಕಾರರ ಸಾಧಕರ ಜೀವನ ಚರಿತ್ರೆ ಪಠ್ಯದಲ್ಲಿ ಸೇರ್ಪಡೆಗೊಳಿಸಬೇಕು.
ಎಸ್.ಎನ್.ಚನ್ನಬಸಪ್ಪ ಶಿವಮೊಗ್ಗ ಶಾಸಕ
ಮಡಿವಾಳ ಸಮಾಜ ಸಂಖ್ಯಾ ಬಲ ಇಲ್ಲದ ಕಾರಣ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಸರ್ಕಾರ ಸಮಾಜಕ್ಕೆ ಅಸ್ತಿತ್ವ ನೀಡಬೇಕು. ಮಾಚಿದೇವರ ಚರಿತ್ರೆ ಪಠ್ಯಪುಸ್ತಕದಲ್ಲಿ ಸೇರಿಸಬೇಕು. ಶಾಲೆಗಳಲ್ಲಿ ಅವರ ಜಯಂತಿ ಆಚರಿಸುವಂತಾಗಬೇಕು
ಎ.ಎಂ.ನಾಗರಾಜ ತ್ಯಾಗರ್ತಿ ಶಾಲೆ ಶಿಕ್ಷಕ
ನಾಡಿನ ಶೋಷಿತ ಹಾಗೂ ದುರ್ಬಲ ವರ್ಗಗಳನ್ನು ಮೇಲೆತ್ತಿ ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ಉದ್ದೇಶದಿಂದಲೇ ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಿ
ಎಚ್.ಎಸ್.ಸುಂದರೇಶ್ ಸುಡಾ ಅಧ್ಯಕ್ಷ
ಮಡಿವಾಳ ಸಮುದಾಯದವರು ಕಾಯಕ ನಿಷ್ಠರು. ಮುಂದಿನ ಪೀಳಿಗೆಯ ಬಲವರ್ಧನೆಗೆ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಅವರು ಎಲ್ಲ ರಂಗಗಳಲ್ಲಿ ಬೆಳೆಯುವಂತೆ ಗಮನ ಹರಿಸಬೇಕು.
ಕೆ.ಚೇತನ್ ಜವಳಿ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ