ಶಿವಮೊಗ್ಗ: ‘ಕಾಯಕವೇ ಎಲ್ಲಕ್ಕಿಂತ ಶ್ರೇಷ್ಠ. ಮನುಷ್ಯತ್ವ ಬೋಧಿಸುವುದೇ ನಿಜವಾದ ಧರ್ಮ ಎಂದು ನಂಬಿ ಅದನ್ನೇ ಪ್ರತಿಪಾದಿಸುತ್ತಿದ್ದ ಕಾಯಕಯೋಗಿ ಸಿದ್ದರಾಮೇಶ್ವರರು ನಮ್ಮೆಲ್ಲರಿಗೂ ಆದರ್ಶ ಪುರುಷರು’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದರಾಮೇಶ್ವರರು ನೇರ ನುಡಿಯ ದಾರ್ಶನಿಕರು. ಬಸವಾದಿ ಶರಣರೊಂದಿಗೆ ಸಮ ಸಮಾಜದ ನಿರ್ಮಾಣದಲ್ಲಿ ತೊಡಗಿದ್ದವರು. 12ನೇ ಶತಮಾನದಲ್ಲೇ ನೂರಾರು ಕೆರೆ, ಕಟ್ಟೆಗಳನ್ನು ನಿರ್ಮಿಸಿ ನೀರಾವರಿ ಕ್ರಾಂತಿಗೆ ನಾಂದಿ ಹಾಡಿದವರು ಎಂದರು.

ಸಮಾಜದಲ್ಲಿ ಮೂಢನಂಬಿಕೆ, ಅಸಮಾನತೆ, ತಾರತಮ್ಯಗಳನ್ನು ತಿರಸ್ಕರಿಸಿದ್ದ ಅವರು, ಮನುಷ್ಯತ್ವವೇ ಮುಖ್ಯವೆಂದು ಮನುಕುಲದ ಏಳ್ಗೆಗಾಗಿ ದುಡಿದರು. ಇಂತಹ ಮಹಾನ್ ವ್ಯಕ್ತಿ ಪ್ರತಿಪಾದಿಸಿದ ಮೌಲ್ಯಗಳು ಯುವ ಪೀಳಿಗೆಗೆ ಮಾದರಿ ಎಂದು ತಿಳಿಸಿದರು.

ಪತ್ರಕರ್ತ ದೇಶಾದ್ರಿ ಹೊಸ್ಮನೆ ಉಪನ್ಯಾಸ ನೀಡಿ ಮಾತನಾಡಿ, ‘ಯಾವುದೇ ಮಹಾನ್ ಪುರುಷರ, ದಾರ್ಶನಿಕರ ಜಯಂತಿಗಳು ಆತ್ಮಾವಲೋಕನಕ್ಕೆ ವೇದಿಕೆಯಾಗಬೇಕು. ಮಹನೀಯರ ಜೀವನ ಚರಿತ್ರೆ, ಮೌಲ್ಯಗಳು, ತತ್ವಗಳನ್ನು ಅರಿತು ಅವುಗಳನ್ನು ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯುವ ಪ್ರಯತ್ನಗಳಾಗಬೇಕೇ ವಿನಾ ಕೇವಲ ಸಭೆ ಸಮಾರಂಭಗಳಿಗೆ ಸೀಮಿತವಾಗಬಾರದು’ ಎಂದರು.

12ನೇ ಶತಮಾನದ ವಚನ ಚಳವಳಿ ನಾವ್ಯಾರೂ ಮರೆಯಲಿಕ್ಕೆ ಸಾಧ್ಯವಿಲ್ಲ. ಅಂತಹ ಚಳವಳಿಯಲ್ಲಿ ಸಿದ್ದರಾಮೇಶ್ವರರು ಮುಂಚೂಣಿಯಲ್ಲಿದ್ದರು. ಬಸವಣ್ಣನವರ ಸಮ ಸಮಾಜ ನಿರ್ಮಾಣ ಪರಿಕಲ್ಪನೆಯಿಂದ ಪ್ರೇರೇಪಣೆಗೊಂಡು ಅದೇ ಮಾರ್ಗದಲ್ಲಿ ನಡೆದವರು ಸಿದ್ದರಾಮೇಶ್ವರರು. ಅಧಿಕಾರದ ಆಸೆ ತಿರಸ್ಕರಿಸಿ, ಬಸವಣ್ಣನವರ ಸಂಪರ್ಕ ಬೆಳೆದು ವಚನ ಚಳವಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಜಾತಿ ವ್ಯವಸ್ಥೆ ವಿರುದ್ದ ಹೋರಾಡುತ್ತಾರೆ ಎಂದು ಹೇಳಿದರು.

‘ದೊಡ್ಡ ದೊಡ್ಡ ಕಟ್ಟಡ, ಅರಮನೆ, ಅಣೆಕಟ್ಟು ಕಟ್ಟುವ ಸಂಸ್ಕೃತಿಯ ಪ್ರತೀಕವಾದ ನಮ್ಮ ಸಮಾಜದವರು ಕೀಳರಿಮೆ ಬಿಟ್ಟು ಉನ್ನತ ಸ್ಥಾನದಲ್ಲಿದ್ದೇವೆ ಎಂದು ಹೆಮ್ಮೆ ಪಡಬೇಕು. ಸಂಘಟಿತರಾಗಬೇಕು. ಸಮಾಜಕ್ಕಾಗಿ ನಾವು ಕೊಡುಗೆಗಳ ನೀಡಬೇಕು. ಕುಲಗುರುಗಳ ಮಹತ್ವ ತಿಳಿದು ಎಚ್ಚರಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಪರಿಶಿಷ್ಟ ಜಾತಿ ಮತ್ತು ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಚೇತನ್ ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಭೋವಿ ವಿದ್ಯಾವರ್ಧಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರವಿಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಜಗದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಅಭಿಷೇಕ್, ಎಎಸ್ಪಿ ರಮೇಶ್ ಕುಮಾರ್, ಕನ್ನಡ, ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಹಾಜರಿದ್ದರು.

ಸಮುದಾಯದ ಏಕತೆಯೇ ಯಶಸ್ಸಿಗೆ ಮೂಲ:

ಸಿದ್ದರಾಮೇಶ್ವರ ಶ್ರೀ ಶಿವಮೊಗ್ಗ: ಸಮುದಾಯದಲ್ಲಿ ಏಕತೆ ಇಲ್ಲದಿದ್ದರೆ ಯಾವುದೇ ಕ್ಷೇತ್ರದಲ್ಲಿಯೂ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ನಂದಿಗುಡಿ ವೃಷಭಪುರಿ ಸಂಸ್ಥಾನಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ನಗರದ ಗುರುಸಿದ್ದರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ನೊಳಂಬ ಲಿಂಗಾಯತ ಸಮಾಜದಿಂದ ಆಯೋಜಿಸಿದ್ದ ಶ್ರೀಗುರು ಸಿದ್ದರಾಮೇಶ್ವರರ 853ನೇ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನೊಳಂಬ ಸಮುದಾಯದಲ್ಲಿ ಆರ್ಥಿಕ ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಇಚ್ಛಾಶಕ್ತಿ ಮೂಡಿಬರುತ್ತಿದೆ. ಅದು ಸಂತೋಷಕರ. ಹಿಂದೊಮ್ಮೆ ರಾಜ್ಯದಲ್ಲಿ 9 ಶಾಸಕರು ನೊಳಂಬ ಸಮುದಾಯದವರಿದ್ದರು. ಈಗ ಒಬ್ಬ ಶಾಸಕರಷ್ಟೇ ಉಳಿದಿದ್ದಾರೆ. ಇದಕ್ಕೆ ಬೇರೆ ಯಾರೂ ಹೊಣೆಗಾರರಲ್ಲ. ನಮ್ಮ ಸಮುದಾಯದವರೇ ಹೊಣೆ. ಆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಸೂತ್ರವಿಲ್ಲದ ಗಾಳಿಪಟ ಗುರುವಿಲ್ಲದ ವಿದ್ಯೆ ಗುರಿ ಇಲ್ಲದ ಪ್ರಯಾಣ ಕಡಿವಾಣವಿಲ್ಲದ ಕುದುರೆ ಹಾಗೂ ನಾಯಕನಿಲ್ಲದ ಸೇನೆಯಂತೆ ನೊಳಂಬ ಸಮಾಜ ಆಗಿದೆ. ಇದನ್ನೆಲ್ಲ ಮೀರಿಸಿ ಸಮಾಜದಲ್ಲಿ ನಮ್ಮ ಅಸ್ತಿತ್ವ ಗಟ್ಟಿ ಮಾಡಿಕೊಳ್ಳಬೇಕಿದೆ. ನೊಳಂಬ ಸಮುದಾಯದಲ್ಲಿ ಶ್ರೀಮಂತರಿಗಿಂತ ಬಡ ಕುಟುಂಬಗಳೇ ಹೆಚ್ಚು ಇವೆ. ಅವರ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಬೇಕು. ಆ ನಿಟ್ಟಿನಲ್ಲಿ ಸಂಘಟನೆ ಮಠ-ಮಂದಿರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಸಲಹೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಂದಿ ವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿ ನೊಳಂಬ ಸಮುದಾಯವನ್ನು ರಾಜಕೀಯ ಮುಖಂಡರು ನಿರಂತರವಾಗಿ ಕಡೆಗಣಿಸುತ್ತಿದ್ದಾರೆ.

ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಲು ಸಮುದಾಯದ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಾಗಿದೆ ಎಂದು ಹೇಳಿದರು. ನಗರದಲ್ಲಿ ನೊಳಂಬ ಸಮುದಾಯದ ಅಂದಾಜು 38000 ಜನರು ವಾಸಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಶಕ್ತಿ ಪ್ರದರ್ಶಿಸುವ ಮೂಲಕ ರಾಜಕೀಯವಾಗಿ ಅಸ್ತಿತ್ವ ತೋರಿಸಬೇಕಾಗಿದೆ ಎಂದರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಹಾ.ಮಾ. ನಾಗಾರ್ಜುನ ಮಾತನಾಡಿ ಬಸವಣ್ಣ ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಅವರು ವಚನಗಳನ್ನು ರಚಿಸಿದರೆ ಅವುಗಳನ್ನು ಜೀವನದಲ್ಲಿ ಕಾರ್ಯರೂಪಕ್ಕೆ ತಂದವರು ಸಿದ್ದರಾಮೇಶ್ವರರು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಹೊನ್ನಾಳಿಯ ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ ಉದ್ಘಾಟಿಸಿದರು. ಇದೇ ವೇಳೆ ನಿವೃತ್ತ ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್ ಡಾ.ಧನಂಜಯ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಧ್ಯಾಪಕ ಬಸವರಾಜ್ ನಲ್ಲಿಸರ ನಂದಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಜಿ.ಕೆ.ಪರಮೇಶ್ವರಪ್ಪ ನಂದಿ ಮಹಿಳಾ ವೇದಿಕೆ ಅಧ್ಯಕ್ಷೆ ಉಮಾ ಪಾಟೀಲ್ ಜಯರಾಜ ಗಾಮದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.