ತುಮರಿ (ಶಿವಮೊಗ್ಗ ಜಿಲ್ಲೆ): ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಜನವರಿ 14 ಮತ್ತು 15ರಂದು ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯಲಿದೆ.

ಕಳೆದ ವರ್ಷ ಸಿಗಂದೂರು ಸೇತುವೆ ಉದ್ಘಾಟನೆಗೊಂಡಿದ್ದು, ಸಂಪರ್ಕ ಸುಲಭವಾಗಿದೆ. ಜಾತ್ರೆ ಪ್ರಯುಕ್ತ ಜ. 14ರಂದು ಮುಂಜಾನೆ 4ರಿಂದ ಮಹಾಪೂಜೆ, ವಿಧಿ ವಿಧಾನಗಳು ನಡೆಯಲಿವೆ. ಕುಂಭ ಲಗ್ನದಲ್ಲಿ ಪಲ್ಲಕ್ಕಿ ಉತ್ಸವ ನಡೆಯಲಿವೆ. ಮೆರವಣಿಗೆ ಮೂಲಕ ಮಧ್ಯಾಹ್ನ 12ಕ್ಕೆ ಅಖಂಡ ಜ್ಯೋತಿ ದೇವಸ್ಥಾನ ಪ್ರವೇಶ ಮಾಡಲಿದೆ. ಮಧ್ಯಾಹ್ನ 1.15ರಿಂದ ಧರ್ಮ ಸಭೆ, ರಾತ್ರಿ 7 ಗಂಟೆಗೆ ‘ಶಿವದೂತ ಗುಳಿಗ‘ ನಾಟಕ, ರಾತ್ರಿ 9.30ಕ್ಕೆ ‘ಗಾನ ಮಯೂರ’ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಜ.15ರಂದು ದೇವಿಗೆ ಆಭರಣ ಅಲಂಕಾರ, ಮಹಾಪೂಜೆ, ಸಂಜೆ ದುರ್ಗಾ ದೀಪ ನಮಸ್ಕಾರ, ರಂಗಪೂಜೆ, ಜಾತ್ರೆಯ ಪ್ರಯುಕ್ತ ಪ್ರತಿ ನಿತ್ಯ ನವಚಂಡಿಕಾ ಹೋಮ ನಡೆಯಲಿದೆ. ಸಂಜೆ 6ಕ್ಕೆ ಪಟ್ಲ ಸತೀಶ್ ಶೆಟ್ಟಿ ಅವರ ಭಾಗವತಿಕೆಯ ಪಾವಂಜೆ ಮೇಳದಿಂದ ‘ಶ್ರೀ ದೇವಿ ಲಲಿತೋಪಾಖ್ಯಾನ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು ಅನುವಂಶಿಕ ಧರ್ಮಾಧಿಕಾರಿ ಎಸ್. ರಾಮಪ್ಪ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.