ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರನ್ನು ಆಕರ್ಷಿಸುತ್ತಿದೆ 8 ಕೆ.ಜಿ ತೂಕದ ಗೆಣಸಿನ ಗಡ್ಡೆ!

Published 24 ಜನವರಿ 2024, 13:15 IST
Last Updated 24 ಜನವರಿ 2024, 13:15 IST
ಅಕ್ಷರ ಗಾತ್ರ

ಸೊರಬ: ತಾಲ್ಲೂಕಿನ ಕೊಡಕಣಿ ಗ್ರಾಮದ ಕರಿಯಪ್ಪ ಹೊಸಮನೆ ಅವರು ತಮ್ಮ ಜಮೀನಿನಲ್ಲಿ ಬೆಳೆದಿರುವ ಸುಮಾರು 8 ಕೆ.ಜಿ. ತೂಕದ ಗೆಣಸಿನ ಗಡ್ಡೆ ಗ್ರಾಮಸ್ಥರನ್ನು ಆಕರ್ಷಿಸುತ್ತಿದೆ. ಗುರುವಾರ ಗೆಣಸಿನ ಗಡ್ಡೆಯನ್ನು ಕೀಳುವಾಗ ಈ ಅಪರೂಪದ ಗೆಣಸು ಸಿಕ್ಕಿದ್ದು, ಗ್ರಾಮಸ್ಥರು ಕುತೂಹಲದಿಂದ ನೋಡಲು ಬರುತ್ತಿದ್ದಾರೆ.

ಕರಿಯಪ್ಪ ಹೊಸಮನೆ ಅವರು ತಮ್ಮ ಜಮೀನಿನಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯುತ್ತಾರೆ. ತರಕಾರಿ ಮಧ್ಯದಲ್ಲಿ ಮಿಶ್ರ ಬೆಳೆಯಾಗಿ ಗೆಣಸಿನ ಬಳ್ಳಿ ನಾಟಿ‌ ಮಾಡಿದ್ದು, ಒಂದೊಂದು ಗಡ್ಡೆ ಸುಮಾರು 3 ಕೆ.ಜಿ.ವರೆಗೂ ತೂಕ ಹೊಂದಿವೆ. ಆದರೆ ಈ ವರ್ಷ ಮೊದಲ ಬಾರಿಗೆ 8 ಕೆ.ಜಿ. ತೂಕದ ಗೆಣಸು ಬೆಳೆದಿರುವುದು ಆಶ್ಚರ್ಯ ತಂದಿದೆ ಎಂದು ಕರಿಯಪ್ಪ ಹರ್ಷ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT