ಸೊರಬ: ಪಟ್ಟಣದ ಸಮಗ್ರ ಅಭಿವೃದ್ಧಿಗೆ 2025–26ನೇ ಸಾಲಿನಲ್ಲಿ ₹ 22.80 ಕೋಟಿ ಬಳಸಿಕೊಳ್ಳಲು ಯೋಜನೆ ರೂಪಿಸಿ ಒಟ್ಟು ₹ 23 ಕೋಟಿ ಮೊತ್ತ ಹಾಗೂ ₹10.13 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿ ರಶ್ಮಿ ಬಜೆಟ್ ಮಂಡಿಸಿದರು.

₹ 1.25 ಕೋಟಿ ವೆಚ್ಚದಲ್ಲಿ ಕೆರೆ, ಉದ್ಯಾನ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿಗೆ ₹ 24.82 ಲಕ್ಷ, ರಸ್ತೆ ನಾಮಫಲಕಕ್ಕೆ ₹ 31.62 ಲಕ್ಷ , ಪುರಸಭೆ ಮುಖ್ಯದ್ವಾರಕ್ಕೆ ಸ್ವಾಗತ ಕಮಾನು ಅಳವಡಿಸಲು ₹ 80 ಲಕ್ಷ , ಮುಕ್ತಿ ವಾಹನ ಖರೀದಿಗೆ ₹ 35 ಲಕ್ಷ , ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ₹ 66.91 ಲಕ್ಷ, ರಸ್ತೆ ಚರಂಡಿ ಡೆಕ್ ಸ್ಲ್ಯಾಬ್ ನಿರ್ಮಾಣ ಕಾಮಗಾರಿಗೆ ₹ 3.15 ಕೋಟಿ, ಪ್ರಕೃತಿ ವಿಕೋಪ ನಿರ್ವಹಣೆಗೆ ₹ 15.36 ಲಕ್ಷ, ಬೀದಿ ದೀಪಗಳ ನಿರ್ವಹಣೆ ₹ 83.55 ಲಕ್ಷ, ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗೆ ಅನುದಾನ ಮೀಸಲಿಡಲಾಗಿದೆ ಎಂದರು.

‘ಕುಡಿಯುವ ನೀರಿನ ನಿರ್ವಹಣೆಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ಪುರಸಭೆ ವ್ಯಾಪ್ತಿಯ ಕೆರೆಗಳಲ್ಲಿ ಪುರಸಭೆಯಿಂದಲೇ ಮೀನು ಸಾಕಣೆ ಮಾಡಿ ಬೇಸಿಗೆಯಲ್ಲಿ ಹರಾಜು ಹಾಕಲು ಕ್ರಮ ವಹಿಸಿದ್ದಲ್ಲಿ ಪುರಸಭೆಗೆ ಆದಾಯ ಪಡೆಯಬಹುದು’ ಎಂದು ಪುರಸಭೆ ಸದಸ್ಯ ಎಂ.ಡಿ.ಉಮೇಶ್ ಸಲಹೆ ನೀಡಿದರು.

ಪರಸಭೆ ಸದಸ್ಯರಾದ ಶ್ರೀರಂಜನಿ, ಜಯಲಕ್ಷಿ, ಈರೇಶಪ್ಪ ಸಲಹೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಎಚ್.ವಿ. ಚಂದನ್, ಸದಸ್ಯರಾದ ಮಧುರಾಯ್ ಜಿ.ಶೇಟ್, ನಟರಾಜ್ ಉಪ್ಪಿನ, ಅನ್ಸರ್ ಅಹ್ಮದ್, ಪ್ರೇಮಾ, ಆಫ್ರೀನ್, ಸುಲ್ತಾನಾ ಬೇಗಂ, ಕಂದಾಯ ನಿರೀಕ್ಷಕ ಲಕ್ಷ್ಮೀನಾರಾಯಣ್, ಆರ್.ಒ. ಶ್ರೀನಿವಾಸ್, ಆರೋಗ್ಯ ನಿರೀಕ್ಷಕ ರಂಜಿತ್, ಸಿಬ್ಬಂದಿ ಚೇತನ್, ಕಾರ್ತಿಕ್, ಸಂಪತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.