ಗುರುವಾರ , ಜೂನ್ 24, 2021
24 °C

ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಮೊದಲ ಅಲೆಮಾರಿ ವಿದ್ಯಾರ್ಥಿನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಹ್ಯಾದ್ರಿ ಕಾಲೇಜು ಬಳಿಯ ಜೋಪಡಿಯಲ್ಲಿ ನೆಲೆಸಿರುವ ಅಲೆಮಾರಿ ಜನಾಂಗದ ವಿದ್ಯಾರ್ಥಿನಿ ಎಸ್‌. ಅನುಷಾ ಎಸ್ಸೆಸ್ಸೆಲ್ಸಿ ತೇರ್ಗಡೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಅಲೆಮಾರಿ ಜನಾಂಗದ ಆ ಕುಟುಂಬಗಳಲ್ಲೇ ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಮೊದಲ ವಿದ್ಯಾರ್ಥಿನಿ.

ಚಿಕ್ಕಂದಿನಲ್ಲೇ ತಂದೆ ಕಳೆದುಕೊಂಡು ಟೆಂಟ್‌ನಲ್ಲಿ ತಾಯಿ ಜತೆ ವಾಸಿಸುತ್ತಾ ಕ್ಯಾಂಡಲ್‌ ಲೈಟ್‌ ಬೆಳಕಿನಲ್ಲಿ ಓದಿದ್ದಾಳೆ. ನಿತ್ಯವೂ
ಹರಿಗೆಯ ಶರಾವತಿ ರಾಷ್ಟ್ರೀಯ ಪ್ರೌಢಶಾಲೆಗೆ ನಡೆದುಕೊಂಡು ಹೋಗಿ ಓದಿದ್ದಲ್ಲದೇ, ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ತಾಯಿ ಇಂದ್ರಮ್ಮ ಅವರಿಗಾಗಿ ಶಾಲೆ ಮುಗಿದ ನಂತರ ಬೇರೆಯವರ ಮನೆಯಲ್ಲಿ ಕಸ, ಮುಸುರೆ ಕೆಲಸ ಮಾಡಿ ಹಣವನ್ನೂ ಸ್ವತಃ ಸಂಪಾದಿಸಿದ್ದಾಳೆ. ಇಂತಹ ಸಮಸ್ಯೆಗಳ ಮಧ್ಯೆ 315 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.