ಶಿವಮೊಗ್ಗ: ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆ 11 ಮಂದಿ ಟಾಪರ್ಗಳನ್ನು ಹೊಂದಿದ್ದು, ಜಿಲ್ಲಾವಾರು ಸ್ಥಾನದ ಲೆಕ್ಕಚಾರದಲ್ಲಿ 26ನೇ ಸ್ಥಾನಕ್ಕೆ ಕುಸಿದಿದೆ.

ಈ ಬಾರಿ ಗುಣಮಟ್ಟದ ಆಧಾರದಲ್ಲಿ ಜಿಲ್ಲಾವಾರು ಗ್ರೇಡ್ ನೀಡಲಾಗಿದ್ದು, ಅದರಲ್ಲಿ ಶಿವಮೊಗ್ಗ ಜಿಲ್ಲೆ ‘ಎ’ ಗ್ರೆಡ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ ಜಿಲ್ಲಾವಾರು ಪಟ್ಟಿಯಲ್ಲಿ ಶಿವಮೊಗ್ಗ 19ನೇ ಸ್ಥಾನದಲ್ಲಿತ್ತು. ಈ ಬಾರಿ 26ನೇ ಸ್ಥಾನಕ್ಕೆ ಕುಸಿದಿದೆ.

ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ನಾಲ್ಕೆದು ವರ್ಷಗಳಿಂದ ಡಿಡಿಪಿಐ ನೇತೃತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿತ್ತು. ಜಿಲ್ಲೆಯನ್ನು 10ರೊಳಗಿನ ಸ್ಥಾನದಲ್ಲಿ ಕಾಣಬೇಕೆಂಬ ಗುರಿಯೊಂದಿಗೆ ಆಯಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ಫಲಿತಾಂಶ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಹುರಿದುಂಬಿಸಲಾಗಿತ್ತು. ಆದರೆ, ಈ ಬಾರಿ ಶಿಕ್ಷಣ ಇಲಾಖೆಯ ಹಾಗೂ ಶಾಲಾ ಮುಖ್ಯಸ್ಥರ ಪ್ರಯತ್ನ ಪರಿಣಾಮ ಬೀರಿಲ್ಲ.

ಈ ಬಾರಿ 19,574 ವಿದ್ಯಾರ್ಥಿಗಳ ಪೈಕಿ 3,242 ವಿದ್ಯಾರ್ಥಿಗಳು ಎ+ ಗ್ರೇಡ್ನಲ್ಲಿ, 4,297 ವಿದ್ಯಾರ್ಥಿಗಳು ‘ಎ’ ಗ್ರೇಡ್ನಲ್ಲಿ, 4,388 ವಿದ್ಯಾರ್ಥಿಗಳು ಬಿ+, 4,076 ವಿದ್ಯಾರ್ಥಿಗಳು ‘ಬಿ’, 2,955 ವಿದ್ಯಾರ್ಥಿಗಳು ಸಿ+, 616 ‘ಸಿ’ ಗ್ರೇಡ್ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.