ಮಂಗಳವಾರ, ಜನವರಿ 25, 2022
28 °C

ಸೊರಬ: ‘ವೈಚಾರಿಕ ಚಿಂತನೆಯ ಅಗ್ರಗಣ್ಯ ಸಂತ ವಿವೇಕಾನಂದ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊರಬ: ಸಾಮಾನ್ಯರಂತೆ ಬದುಕಿದ ಸ್ವಾಮಿ ವಿವೇಕಾನಂದರು ತಮ್ಮ ವೈಚಾರಿಕ ಚಿಂತನೆಗಳ ಮೂಲಕ ಅಗ್ರಗಣ್ಯ ಸಂತರಾದರು ಎಂದು ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮುರುಘಾಮಠದ ಸಭಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಮಂಡಳಿ, ದುರ್ಗಾಶಕ್ತಿ, ಅಕ್ಕನಬಳಗ, ಬ್ರಾಹ್ಮಣ ಸಮಾಜ, ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಆರ್ಯ ಈಡಿಗರ ಸಂಘ ಸೇರಿ ವಿವಿಧ ಸಂಘ–ಸಂಸ್ಥೆಗಳ ಆಶ್ರಯದಲ್ಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಠಗಳಲ್ಲಿ ಕೂತು ದರ್ಬಾರು ಮಾಡುವ ಸ್ವಾಮೀಜಿಗಿಂತ ಬಡವರ ಕಷ್ಟ, ಸುಖಗಳಲ್ಲಿ ಭಾಗಿಯಾಗಿ ಸಮಾಜದ ಒಳಿತಿನ ಬಗ್ಗೆ ಚಿಂತಿಸುವ ಗುರುಗಳ ಕಾರ್ಯ ಮಹತ್ವದ್ದಾಗಿದೆ. ವಿವೇಕಾನಂದರು ಸಮಾಜದ ಬಗ್ಗೆ ನಂಬಿಕೆ ಇಟ್ಟು ಸಾಧನೆ ಮಾಡಿದ್ದರಿಂದಲೇ ವೀರ ಸನ್ಯಾಸಿ ಎನ್ನುವ ಹೆಸರು ಪಡೆಯಲು ಸಾಧ್ಯವಾಯಿತು ಎಂದರು.

ಡಾ.ಜ್ಞಾನೇಶ್ ಮಾತನಾಡಿದರು. ಹೊಸಪೇಟೆ ಬಡಾವಣೆಯ ಹೊಸಬಾಳೆ ರಸ್ತೆ ಮಾರ್ಗದ ವೃತ್ತಕ್ಕೆ ‘ಸ್ವಾಮಿ ವಿವೇಕಾನಂದ ವೃತ್ತ’ ಎಂದು ನಾಮಕರಣ ಮಾಡಲಾಯಿತು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ತಲಕಾಲಕೊಪ್ಪ, ಯುವ ಬ್ರಿಗೇಡ್‌ನ ಮಹೇಶ್ ಖಾರ್ವಿ, ಮಂಜು, ವಿನೋದ್ ವಾಲ್ಮೀಕಿ, ವಿಶ್ವ ಹಿಂದೂ ಪರಿಷತ್ ತಾಲ್ಲೂಕು ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್, ಬಜರಂಗದಳ ಸಂಚಾಲಕ ರಂಗನಾಥ ಮೊಗವೀರ್, ವಸಂತಿ ನಾವುಡಾ, ಅನಿತಾ ದಾಮ್ಲೆ, ಅರ್ಚನಾ ಬಾಪಟ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.