ಎಲ್ಲ ವರ್ಗಗಳಿಗೂ ಸಮಾನ ಅವಕಾಶ ದೊರೆಯಬೇಕು ಎಂಬುದು ಬಸವಣ್ಣನವರ ಆಶಯ. ಈ ದೇಶ ಎಲ್ಲರಿಗೂ ಸೇರಿದ್ದು, ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ನಮ್ಮ ಶಕ್ತಿಯಾಗಿದೆ. ಮನುಷ್ಯನ ಭಾವನೆ ಬಹಳ ಮುಖ್ಯ. ನಮ್ಮ ಜಾತಿ ನಮ್ಮ ಮನೆಯ ಒಳಗಡೆ ಇರಬೇಕು, ಹೊರಗಡೆ ಮನುಷ್ಯತ್ವ ಕಾಣಬೇಕು.
ದಿನೇಶ್ ಗುಂಡೂರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
ಸಿರಿಗೆರೆ ಮಠವು ಸಂಸ್ಕೃತಿ ಮತ್ತು ಸಂಸ್ಕಾರ ಕಲಿಸುತ್ತಿದ್ದು, ಬದುಕಿನ ಸತ್ಯ ದರ್ಶನವಾಗಬೇಕೆಂದರೆ ತರಳಬಾಳು ಹುಣ್ಣಿಮೆಗೆ ಬರಬೇಕಾಗಿದೆ. ಗುರುಪರಂಪರೆಯನ್ನು ಆಚರಿಸುವುದು ಈ ಮಠದ ವಿಶೇಷ.
ಬಸವರಾಜ ಬೊಮ್ಮಾಯಿ, ಹಾವೇರಿ ಸಂಸದ
ಧಾರ್ಮಿಕ ಪೀಠಗಳು ಸಂಘರ್ಷದ ದಾರಿಯಲ್ಲದೇ ಸಂವಾದ ಹಾಗೂ ಸಮಾಧಾನದ ದಿಕ್ಕಿನಲ್ಲಿ ಸಮಾಜವನ್ನು ಮುನ್ನಡೆಸುತ್ತಿವೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಸಮಾಜಕ್ಕೆ ತೋರಿಸಿ ಕೊಟ್ಟಿರುವ ತರಳಬಾಳು ಶ್ರೀಗಳು. ಉಬ್ರಾಣಿ, ಭರಮಸಾಗರ, ಜಗಳೂರು ಏತ ನೀರಾವರಿ ಯೋಜನೆಗಳಿಗೆ ಕಾರಣಕರ್ತರು.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆಯುವ ಮೂಲಕ ಗ್ರಾಮಾಂತರ ಪ್ರದೇಶದ ಜನರ ಶಿಕ್ಷಣ ಮಟ್ಟವನ್ನು ಎತ್ತರಿಸುವಲ್ಲಿ ಸಿರಿಗೆರೆ ಮಠ ಮಹತ್ತರ ಪಾತ್ರ ವಹಿಸಿದೆ. ಸಮಾಜದಲ್ಲಿ ಜ್ಞಾನ, ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶ್ರೀಗಳ ಕೊಡುಗೆ ಅನನ್ಯ