ಮಂಗಳವಾರ, ಜನವರಿ 26, 2021
15 °C

ಶಿಕ್ಷಕರ ಸಂಘ: ಸಿ.ಎಸ್. ಷಡಾಕ್ಷರಿ ಬಣಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಬಣ ಶಿವಮೊಗ್ಗ ತಾಲ್ಲೂಕಿನಲ್ಲಿ ಭರ್ಜರಿ ಜಯಗಳಿಸಿದೆ.

ಬುಧವಾರ ಚುನಾವಣೆಗಳ ಫಲಿತಾಂಶ ಹೊರಬಿದ್ದಿದ್ದು, ಶಿವಮೊಗ್ಗ ತಾಲ್ಲೂಕಿನ 24 ಸ್ಥಾನಗಳಲ್ಲಿ ಸಿಎಸ್ ಷಡಾಕ್ಷರಿ ಅವರ ಬಣದ 14 ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

ಪುರುಷರ ವಿಭಾಗದಲ್ಲಿ ಜಿ.ಆನಂದಪ್ಪ, ದಿನೇಶ್, ಹಾಲೇಶಪ್ಪ, ಜಯ, ನಾಗರಾಜ್, ಪ್ರಸಾದ್ ಬಾಬು. ಜಿ.ರವಿ, ಎಂ.ರವಿ, ರುದ್ದಪ್ಪ, ರುದ್ರೇಶ್ ಸ್ಪಂದನ ತಂಡದಿಂದ ಗೆಲವು ಸಾಧಿಸಿದರೆ, ಎದುರಾಳಿ ಮಂಜಾನಾಯ್ಕ್ ಅವರ ಶಿಕ್ಷಕ ಮಿತ್ರ ತಂಡದ ಅಯೂಬ್ ಖಾನ್, ಮಂಜನಾಯ್ಕ, ಮಂಜಯ್ಯ, ನಾಗಭೂಷಣ್, ರುದ್ರೇಶ್, ಸಿದ್ದಪ್ಪ ಗೆಲವು
ಸಾಧಿಸಿದ್ದಾರೆ.

ಮಹಿಳಾ ವಿಭಾಗದಲ್ಲಿ ಸ್ಪಂದನ ತಂಡದ ಸುಮತಿ.ಜಿ, ಶೈಲಶ್ರೀ, ಅನಿತಾ ಕುಮಾರಿ, ವಾಣಿ ಗೆದ್ದು ಬೀಗಿದರೆ. ಶಿಕ್ಷಕ ಮಿತ್ರ ತಂಡದ ಮಹಿಳಾ ವಿಭಾಗದಲ್ಲಿ ದೀಪಾ ಕುಬ್ಸದ್, ಗಾಯಿತ್ರಿ, ಸುನೀತಾ, ಶಶಿರೇಖಾ ಜಯಗಳಿದ್ದಾರೆ. 24 ಕಾರ್ಯಕಾರಿ ಸಮಿತಿಯಲ್ಲಿ 14 ಸ್ಥಾನ ಷಡಾಕ್ಷರಿ ಬಣ ಗೆದ್ದುಕೊಂಡರೆ, 10 ಸ್ಥಾನವನ್ನು ಇವರ ವಿರುದ್ಧದ ಮಂಜನಾಯ್ಕರ ಶಿಕ್ಷಕ ಮಿತ್ರ ತಂಡ ಗೆಲವು ಸಾಧಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.