ಶಿವಮೊಗ್ಗ: ಶಿವನ ಮೇಲೆ ನಂಬಿಕೆ ಇಟ್ಟಿದ್ದ ದೇವರ ದಾಸಿಮಯ್ಯ ಅವರು ದೈವತ್ವದಲ್ಲೇ ತಮ್ಮ ಕಾಯಕವನ್ನು ನಿರ್ವಹಿಸಿದವರು. ಆಧ್ಯಾತ್ಮಿಕತೆಯ ಮಹತ್ವವನ್ನು ವಿಶ್ವಕ್ಕೆ ಸಾರಿದವರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಜ್ಜನರು, ದೈವಭಕ್ತರು, ಧಾರಾಳತನವುಳ್ಳವರೂ ಆಗಿದ್ದ ದೇವರ ದಾಸಿಮಯ್ಯ ಅವರು ಯಾರೇ ಕಷ್ಟದಲ್ಲಿದ್ದರೂ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಪ್ರತಿಯೊಬ್ಬ ಮಾನವನು, ಉತ್ತಮ ಸಂಸ್ಕೃತಿ, ಧರ್ಮ, ಆಚಾರವಾಗಿ ನಡೆಸಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದರು.

ದಾಸಿಮಯ್ಯ ದಂಪತಿ ಸೀರೆ ನೇಯ್ಗೆ ಉದ್ಯೋಗದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ನೇಯ್ಗೆಯನ್ನು ದೇವರ ಕಾರ್ಯದಂತೆ ಆಚರಿಸುತ್ತಾ ಇತರರಿಗೆ ಮಾದರಿಯಾದವರು. ಅನೇಕ ಮಂದಿಗೆ ಉದ್ಯೋಗ ಕಲಿಸಿ ಜೀವನೋಪಾಯಕ್ಕೆ ದಾರಿ ತೋರಿಸಿದವರು ಎಂದು ಸ್ಮರಿಸಿದರು.

‘ದೇವರ ದಾಸಿಮಯ್ಯ ಅವರ ವಚನಗಳು ಮನುಷ್ಯನ ದಿಕ್ಕನ್ನೇ ಬದಲಿಸುತ್ತವೆ. ಜೀವನದ ಅನುಭವ ಅವರ ವಚನಗಳಲ್ಲಿ ಕಾಣಬಹುದು. ಅದರಲ್ಲಿನ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಉಮೇಶ್, ಮಲ್ನಾಡ್ ದೇವಾಂಗ ಸಮಾಜದ ಅಧ್ಯಕ್ಷ ಗಿರಿಯಪ್ಪ, ಕಾರ್ಯದರ್ಶಿ ಜಿ. ಮೋಹನ್ ಮೂರ್ತಿ, ನಗರ ದೇವಾಂಗ ಸಂಘದ ಅಧ್ಯಕ್ಷರ ಡಿ. ಸತೀಶ್, ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಕೆ.ಸುಲೋಚನ ಶಂಕರ ಮೂರ್ತಿ, ಸಮಾಜದ ಮುಖಂಡರಾದ ಕಾಂತೇಶ್, ಎಸ್.ಎಸ್.ಶಿವಾನಂದ ಸ್ವಾಮಿ, ವಿಜಯ ಭಾಸ್ಕರ್, ಮಂಜುನಾಥ್ ರಾಮಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.