ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಾ ಜಲಾಶಯ: ವೈರ್‌ ರೋಪ್‌ನಲ್ಲಿ ದೋಷ, ಇಇ ಪರಿಶೀಲನೆ

-
Published : 12 ಆಗಸ್ಟ್ 2024, 15:17 IST
Last Updated : 12 ಆಗಸ್ಟ್ 2024, 15:17 IST
ಫಾಲೋ ಮಾಡಿ
Comments

ಶಿವಮೊಗ್ಗ: ವೈರ್‌ರೋಪ್‌ನಲ್ಲಿನ ದೋಷ ಕಾಣಿಸಿಕೊಂಡಿರುವ ಇಲ್ಲಿನ ಗಾಜನೂರಿನ ತುಂಗಾ ಜಲಾಶಯದ ಎಂಟನೇ ಸಂಖ್ಯೆಯ ಗೇಟನ್ನು ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಪ್ರಸಾದ್ ಸೋಮವಾರ ಪರಿಶೀಲನೆ ನಡೆಸಿದರು.

ವೈರ್ ರೋಪ್‌ನಲ್ಲಿ (ಗೇಟ್ ಎತ್ತುವ ಉಕ್ಕಿನ ಹಗ್ಗ) ದೋಷ ಕಾಣಿಸಿಕೊಂಡಿರುವ ಪರಿಣಾಮ ಈ ಮಳೆಗಾಲದಲ್ಲಿ ಜಲಾಶಯದ 22 ರೇಡಿಯಲ್‌ ಗೇಟ್‌ಗಳ ಪೈಕಿ 21ನ್ನು ಮಾತ್ರ ತೆರೆದು ನದಿಗೆ ನೀರು ಹರಿಸಲಾಗಿದೆ.

ರೇಡಿಯಲ್ ಗೇಟ್‌ನ ವೈರ್‌ರೋಪ್‌ನಲ್ಲಿ ಆತಂಕ ಪಡುವಂತಹ ದೋಷ ಕಂಡುಬಂದಿಲ್ಲ. ಅದು ಅಣೆಕಟ್ಟೆಯ ವಾರ್ಷಿಕ ನಿರ್ವಹಣೆಯ ಭಾಗ ಮಾತ್ರ. ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಆದ ನಂತರ ಅದನ್ನು ಸರಿಪಡಿಸಲಾಗುವುದು. ರೋಪ್‌ಗೆ ಹತ್ತಿರುವ ಕಸದಿಂದಲೂ ಅದು ದೋಷಪೂರಿತವಾಗಿ ಕಾಣಿಸುತ್ತಿರಬಹುದು. ಅದನ್ನು ಪರಿಶೀಲಿಸಲಾಗುವುದು. ಅಣೆಕಟ್ಟೆಯ ಕೆಳಭಾಗದವರು ಹಾಗೂ ಅಚ್ಚುಕಟ್ಟು ಪ್ರದೇಶದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಕೃಷ್ಣಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವೇಳೆ ತುಂಗಾ ಜಲಾಶಯ ಯೋಜನಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಪ್ಪಾನಾಯ್ಕ ಕೂಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT