ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾವತಿ | ವಿಐಎಸ್ಎಲ್ ಸೊಸೈಟಿ ಅಮಾನತು: ಪಡಿತರದಾರರಿಗೆ ಪರ್ಯಾಯ ವ್ಯವಸ್ಥೆ

Published 23 ಆಗಸ್ಟ್ 2024, 15:14 IST
Last Updated 23 ಆಗಸ್ಟ್ 2024, 15:14 IST
ಅಕ್ಷರ ಗಾತ್ರ

ಭದ್ರಾವತಿ: ನಗರದ ನ್ಯೂ ಟೌನ್‌ನ ನ್ಯಾಯಬೆಲೆ ಅಂಗಡಿ ವಿಐಎಸ್ಎಲ್ ಸೊಸೈಟಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾ ಉಪ ನಿರ್ದೇಶಕರು ಅಮಾನತುಗೊಳಿಸಿದ್ದು, ಈ ಸೊಸೈಟಿ ವ್ಯಾಪ್ತಿಯ ಪಡಿತರದಾರರಿಗೆ ತಾತ್ಕಾಲಿಕ ಪರಿಹಾರ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ನ್ಯಾಯಬೆಲೆ ಅಂಗಡಿಗೆ ಸಂಬಂಧಿಸಿದಂತೆ ದೂರುಗಳು ಬಂದ ಕಾರಣ ಆಹಾರ ಇಲಾಖೆ ನಿರೀಕ್ಷಕರು ದಾಳಿ ನಡೆಸಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸೊಸೈಟಿಯಲ್ಲಿ 29.97 ಕ್ವಿಂಟಲ್ ಅಕ್ಕಿ ಬದಲು ಕೇವಲ 3.50 ಕ್ವಿಂಟಲ್ ಅಕ್ಕಿ ಕಂಡು ಬಂದಿದೆ. ಉಳಿದ 26.47 ಕ್ವಿಂಟಲ್ ಅಕ್ಕಿ ದಾಸ್ತಾನು ಇಲ್ಲದಿರುವ ಬಗ್ಗೆ ಹಾಗೂ ನ್ಯಾಯ ಬೆಲೆ ಅಂಗಡಿಯ ಇನ್ನಿತರ ಅನನುಕೂಲಗಳ ಬಗ್ಗೆ ಜಿಲ್ಲಾ ಉಪ ನಿರ್ದೇಶಕರಿಗೆ ವರದಿ ಸಲ್ಲಿಸಿ, ಅಮಾನತುಗೊಳಿಸಿ ವಿಚಾರಣೆಗೆ ಕಾಯ್ದಿರಿಸಿದ್ದಾರೆ.

ಪಡಿತರದಾರರ ಹಿತದೃಷ್ಟಿಯಿಂದ ಸಮೀಪದ ನ್ಯಾಯ ಬೆಲೆ ಅಂಗಡಿ ಸಂಖ್ಯೆ 20 ಎಂ.ಎಂ ಕಾಂಪೌಂಡ್, ಪಿಸಿಸಿಎಸ್ ತರಿಕೆರೆ ರಸ್ತೆ ಇಲ್ಲಿ ಪಡಿತರ ವಿತರಿಸಲು ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆದೇಶ ಹೊರಡಿಸಿದ್ದಾರೆ.

ಆದ್ದರಿಂದ ಪಡಿತರದಾರರು ಈ ಸ್ಥಳಗಳಲ್ಲಿ ಪಡಿತರ ಪಡೆದುಕೊಳ್ಳಲು ಇಲಾಖೆಯ ಸಹಾಯಕ ನಿರ್ದೇಶಕರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT