ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ಆರೋಪ: ಪತಿ ವಿರುದ್ಧ ಪತ್ನಿ ದೂರು

Last Updated 25 ಜನವರಿ 2022, 4:44 IST
ಅಕ್ಷರ ಗಾತ್ರ

ಶಿಕಾರಿಪುರ:ತಾಲ್ಲೂಕಿನ ಹಿತ್ತಲ ಗ್ರಾಮ ಸಮೀಪದ ಮಾಡ್ರಳ್ಳಿಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುವಂತೆ ಪತಿ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗ್ರಾಮದ ನಿರ್ಮಲಾಬಾಯಿ ಅವರು ಪತಿ ಸುರೇಶ್ ನಾಯ್ಕ ವಿರುದ್ಧ ದೂರು ನೀಡಿದ್ದಾರೆ.

‘ಪತಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ. ನನಗೆ ಇಷ್ಟವಿಲ್ಲದಿದ್ದರೂಕೆಲ ತಿಂಗಳುಗಳಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುವಂತೆ ನಿತ್ಯ ಒತ್ತಡ ಹಾಕಿ, ಹೊಡೆಯುತ್ತಿದ್ದಾರೆ. ರಾತ್ರಿ ಹೊತ್ತು ಅವರ ಬೋಧನೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹೇಳಲು ಹೋದರೆ ನನಗೆ ಹೊಡೆದು ತವರು ಮನೆಗೆ ಹೋಗು’ ಎನ್ನುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಒಂದೂವರೆ ತಿಂಗಳಿನಿಂದ ಮನೆ ಬಿಟ್ಟು ಹೋಗಿ ಅವರ ಚಿಕ್ಕಪ್ಪ ದುರ್ಗಾನಾಯ್ಕ ಮನೆಯಲ್ಲಿ ಇದ್ದಾರೆ. ನನಗೆ ನನ್ನ ಧರ್ಮ ಬಿಟ್ಟು ಹೋಗಲು ಮನಸ್ಸಿಲ್ಲ. ಪತಿ ಹಾಗೂ ಅವರ ಚಿಕ್ಕಪ್ಪ ದುರ್ಗಾನಾಯ್ಕ ಇಬ್ಬರೂ ಈ ಬಗ್ಗೆ ಗಲಾಟೆ ಮಾಡುತ್ತಾರೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT