ಶಿವಮೊಗ್ಗ: ಮನೆ ಬಾಡಿಗೆ ವಿಚಾರದಲ್ಲಿ ಉಂಟಾದ ಜಗಳದಿಂದ ತಾಲ್ಲೂಕಿನ ದುಮ್ಮಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಮಹಿಳೆಯೊಬ್ಬರ ಕೊಲೆ ಮಾಡಲಾಗಿದೆ.

ಗ್ರಾಮದ ನಿವಾಸಿ ಗಂಗಮ್ಮ (45) ಕೊಲೆಯಾದ ಮಹಿಳೆ. ಪಕ್ಕದ ಮನೆಯ ಹರೀಶ್ ನಾಯ್ಕ ಮತ್ತು ನಾಗೇಶ್ ನಾಯ್ಕ ಆರೋಪಿಗಳು.

ದುಮ್ಮಳ್ಳಿಯಲ್ಲಿ ಗಂಗಮ್ಮ ಪುತ್ರರಾದ ಜೀವನ್, ಪುನೀತ್ ಹಾಗೂ ತಾಯಿ ನಾಗಮ್ಮ ಅವರೊಂದಿಗೆ ವಾಸವಿದ್ದರು.

ಜೀವನ್ ಎರಡು ವರ್ಷಗಳ ಹಿಂದೆ ತನ್ನ ಚಿಕ್ಕಪ್ಪನ ಮನೆಯನ್ನ ಹರೀಶ್ ನಾಯ್ಕ ನಿಗೆ ಬಾಡಿಗೆಗೆ ಕೊಡಿಸಿದ್ದನು. ಬಾಡಿಗೆ ವಿಚಾರದಲ್ಲಿ ಹರೀಶ್ ನಾಯ್ಕ ಮತ್ತು ಜೀವನ್ ನಡುವೆ ಜಗಳವಾಗಿದೆ.

ಈ ವೇಳೆ ಜೀವನ್ ಮೇಲೆ ಹರೀಶ ನಾಯ್ಕ ಮಾರಕಾಸ್ತ್ರದಿಂದ ಹಲ್ಲೆ ಮಾಡಲು ಮುಂದಾಗಿದ್ದು, ಅದನ್ನು ತಪ್ಪಿಸಲು ಮುಂದಾದ ಗಂಗಮ್ಮ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.