ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಬೇಂದ್ರೆ ವಿಚಾರಗೋಷ್ಠಿ .

Last Updated 16 ಫೆಬ್ರುವರಿ 2011, 6:15 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಲೋಹಿಯಾ ಜನ್ಮಶತಾಬ್ಧಿ ಪ್ರತಿಷ್ಠಾನವು ಧಾರವಾಡದ ಡಾ.ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಹಾಗೂ ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಸಹಯೋಗದೊಂದಿಗೆ ಫೆ. 17ರಂದು ಇಂದಿರಾಗಾಂಧಿ ಕಾಲೇಜಿನಲ್ಲಿ ‘ಕನ್ನಡ ನವೋದಯ ಮತ್ತು ಬೇಂದ್ರೆ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ಏರ್ಪಡಿಸಿದೆ. ಅಂದು ಬೆಳಿಗ್ಗೆ 10.30ಕ್ಕೆ ಬೇಂದ್ರೆ ಟ್ರಸ್ಟ್‌ನ ಅಧ್ಯಕ್ಷ ಡಾ.ಶಾಮಸುಂದರ್ ಬಿದರಕುಂದಿ ಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಡಿ.ಎಸ್. ನಾಗಭೂಷಣ, ಎಸ್.ವಿ. ಕೃಷ್ಣಮೂರ್ತಿ, ಬಿ.ಎಚ್. ರಾಘವೇಂದ್ರ, ಜಿ. ಸಣ್ಣಹನುಮಪ್ಪ ಭಾಗವಹಿಸಲಿದ್ದು, ಕಾಲೇಜಿನ ಪ್ರಾಚಾರ್ಯ ಪ್ರೊ.ಇಬ್ರಾಹಿಂ ಬ್ಯಾರಿ ಅಧ್ಯಕ್ಷತೆ ವಹಿಸಲಿದ್ದಾರೆ.

ಮೊದಲ ಗೋಷ್ಠಿಯಲ್ಲಿ ‘ಕನ್ನಡ ಕಾವ್ಯ ಮತ್ತು ಬೇಂದ್ರೆ’ ಕುರಿತು ಡಾ.ಶುಭಾ ಮರವಂತೆ, ಎರಡನೇ ಗೋಷ್ಠಿಯಲ್ಲಿ ‘ಬೇಂದ್ರೆ ನಾಟಕಗಳು’ ಕುರಿತು ಕೆ.ವಿ. ಅಕ್ಷರ, ಮೂರನೇ ಗೋಷ್ಠಿಯಲ್ಲಿ ‘ಬೇಂದ್ರೆ ಜೀವನ ದೃಷ್ಟಿ ಹಾಗೂ ಸಾಹಿತ್ಯ’ ಕುರಿತು ಪ್ರೊ.ಎಚ್.ಆರ್. ಅಮರ್‌ನಾಥ್ ಮಾತನಾಡಲಿದ್ದಾರೆ. ನಂತರ, ಕವಯತ್ರಿ ಸವಿತಾ ನಾಗಭೂಷಣ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT