ಭದ್ರಾವತಿ: `ಕೃಷಿಕರಿಗೆ ಬೆಳೆ ಕುರಿತಾದ ಮಾಹಿತಿ, ನಿರ್ವಹಣೆ ಹಾಗೂ ರೋಗಬಾಧೆ ನಿವಾರಣೆ ಕುರಿತಾದ ಮಾಹಿತಿ ಮಾತ್ರ ಸಾಲದು, ಅದರೊಟ್ಟಿಗೆ ಮಾರುಕಟ್ಟೆ ಜ್ಞಾನ ಸಹ ನೀಡಬೇಕು~ ಎಂದು ಎಪಿಎಂಸಿ ಅಧ್ಯಕ್ಷ ಎ.ಜಿ. ಶಿವಕುಮಾರ್ ಕರೆ ನೀಡಿದರು.

ಇಲ್ಲಿನ ರೈತರ ಅಡಿಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ (ರ್ಯಾಮ್ಕೊಸ್) ಸಭಾಂಗಣದಲ್ಲಿ ಬುಧವಾರ ತೋಟಗಾರಿಕಾ ಇಲಾಖೆ ಹಾಗೂ ಅಡಿಕೆ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು.

ರೈತ ವರ್ಷಪೂರ್ತಿ ಬೆಳೆದ ಬೆಳೆಯನ್ನು ತನ್ನ ಹಿತಾಸಕ್ತಿ ಕಾಪಾಡುವ ಮಾರುಕಟ್ಟೆ ಆಶ್ರಯಿಸದೇ ಮೋಸ ಹೋಗುವ ಸಾಧ್ಯತೆ ಹೆಚ್ಚಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆ ಕುರಿತಾದ ಜ್ಞಾನವನ್ನು ನೀಡುವುದು ಇಂದು ಆವಶ್ಯವಿದೆ ಎಂದರು.

ಸಮಾರೋಪಕ್ಕೂ ಮುನ್ನ ಶಿವಮೊಗ್ಗ ಅಡಿಕೆ ಸಂಶೋಧನಾ ಕೇಂದ್ರದ ಡಾ.ಶೇಷಗಿರಿ, ಡಾ.ನಾರಾಯಣಸ್ವಾಮಿ ಹಾಗೂ ತೋಟಗಾರಿಕೆ ಇಲಾಖೆ ನಿರ್ದೇಶಕ ಎಂ. ವಿಶ್ವನಾಥ್ ಅವರು ಅಡಿಕೆ ಬೆಳೆ ನಿರ್ವಹಣೆ, ಕೀಟಬಾಧೆ ರಕ್ಷಣೆ ಹಾಗೂ ವಿವಿಧೋದ್ದೇಶ ಯೋಜನೆಗಳ ಕುರಿತಾಗಿ ಮಾಹಿತಿ, ನೀಡಿ ಚಿತ್ರ ಪ್ರದರ್ಶನ ನಡೆಸಿಕೊಟ್ಟರು.

`ರ್ಯಾಮ್ಕೊಸ್~ ಅಧ್ಯಕ್ಷ ಎಂ.ಎಸ್. ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾಗಪ್ಪ, ನಿರ್ದೇಶಕರಾದ ಜಿ.ಈ. ಚನ್ನಪ್ಪ, ಜಿ. ನಂದೀಶ್, ಎಚ್.ಎನ್. ನಾಗರಾಜ್, ಜಿ.ಎನ್. ನಾಗರಾಜಪ್ಪ, ಬಿ.ಜಿ. ಬಸವರಾಜ್ ಉಪಸ್ಥಿತರಿದ್ದರು. ಉಮಾರಾಣಿ ಪ್ರಾರ್ಥಿಸಿದರು. ವಿರೂಪಾಕ್ಷಪ್ಪ ಕಾರ್ಯಕ್ರಮ ನಿರೂಪಿಸಿದರು, ಜಿ. ನಂದೀಶ್ ಸ್ವಾಗತಿಸಿದರು, ಕಾರ್ಯದರ್ಶಿ ಬಿ.ಈ. ನಾಗರಾಜಪ್ಪ ವಂದಿಸಿದರು.

ಬೋರ್ಡ್ ಯಾಕೆ?
`ಎಪಿಎಂಸಿ ಕಚೇರಿಯಲ್ಲಿ ಬಡ್ಡಿರಹಿತ ಸಾಲ ಯೋಜನೆಯೇ ಇಲ್ಲ, ಮತ್ತೆ ಬೋರ್ಡ್ ಯಾಕೆ ಹಾಕಿದ್ದೀರಾ~ ಎಂದು ರೈತರು ಕೇಳಿದ ಪ್ರಶ್ನೆ ಕೆಲ ನಿಮಿಷ ಚರ್ಚೆಗೆ ಗ್ರಾಸವಾಯಿತು.

`ರ್ಯಾಮ್ಕೊಸ್~ ಬುಧವಾರ ಆಯೋಜಿಸಿದ್ದ ಅಡಿಕೆ ಬೆಳೆ ಕುರಿತಾದ ವಿಚಾರ ಸಂಕಿರಣ ಸಮಾರಂಭದಲ್ಲಿ ಎಪಿಎಂಸಿ ಅಧ್ಯಕ್ಷ ಎ.ಜಿ. ಶಿವಕುಮಾರ್ ಭಾಷಣ ಮಾಡುತ್ತಿದ್ದ ವೇಳೆ ಹೀಗೊಂದು ಪ್ರಶ್ನೆ ಎದುರಾಯಿತು.
ಎಪಿಎಂಸಿ ಕಾಯ್ದೆ ಕಾನೂನು ಪ್ರಕಾರ ಅಡಮಾನ ಸಾಲ ನೀಡುವ ಯೋಜನೆ ಇದೆ. ಆದರೆ, ನಮ್ಮಲ್ಲಿ ಕಡಿಮೆ ನಗದು ಇರುವ ಕಾರಣ ಈ ವ್ಯವಸ್ಥೆ ಜಾರಿಯಲ್ಲಿ ಇಲ್ಲ ಎಂದು ಅಧ್ಯಕ್ಷರು ಸಮಜಾಯಿಷಿ ನೀಡುತ್ತಿದ್ದಂತೆ, `ಹಾಗಾದರೆ ಫಲಕ ಯಾಕೆ ಹಾಕಿದ್ದೀರಾ, ಯಾವುದೇ ಒಬ್ಬ ರೈತನಿಗಾದರೂ ಸಾಲ ನೀಡಿದ್ದರೆ ತಿಳಿಸಿ~ ಎಂದು ಸಭೆಯಲ್ಲಿ ಕೆಲವು ರೈತರು ಅಧ್ಯಕ್ಷರನ್ನು ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಅಧ್ಯಕ್ಷರು `ಫಲಕ ಹಾಕುವುದು ನಿಯಮ. ಹಾಗಾಗಿ ಹಾಕಿದ್ದೇವೆ. ಎಲ್ಲಾ ಖರ್ಚು ತೆಗೆದು ನಮ್ಮಲ್ಲಿ ಉಳಿಯುವ ್ಙ 20 ಲಕ್ಷಕ್ಕೆ ಎಷ್ಟು ಮಂದಿಗೆ ಸಾಲ ನೀಡಲು ಸಾಧ್ಯ, ಇದರಲ್ಲಿ ಅಡಿಕೆಗೆ ಸಾಲ ನೀಡಲು ಸಾಧ್ಯವಿಲ್ಲ. ಹಾಗಾಗಿ, ಸರ್ಕಾರ ಅವರ್ತನಿಧಿಯ ಪೂರ್ಣ ಬಳಕೆಗೆ ನಮಗೆ ನೀಡುವಂತೆ ಒತ್ತಾಯ ಹಾಕಿದ್ದು, ಅದು ಫಲಿಸಿದರೆ ಹೆಚ್ಚು ಸಾಲ ನೀಡಬಹುದು~ ಎಂದು ಉತ್ತರಿಸಿದರು.

ಇದಕ್ಕೆ ತೃಪ್ತರಾಗದ ಕೃಷಿಕರು ಅಡಿಕೆಗೆ ಬೇಡ, ರಾಗಿ, ಜೋಳ, ಬತ್ತ ಬೆಳೆಯುವ ಮಂದಿಗಾದರೂ ಸಹಾಯ ಮಾಡಿ ಎಂದು ಒತ್ತಡ ಹೇರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.