ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಟ್ರೋಲ್‌, ಡೀಸೆಲ್‌ ದರ ಇಳಿಕೆ ಆಗಿದ್ದು 1 ಪೈಸೆ; ಕಾಣಿಸಿದ್ದು 60 ಪೈಸೆ!

Last Updated 30 ಮೇ 2018, 7:37 IST
ಅಕ್ಷರ ಗಾತ್ರ

ನವದೆಹಲಿ: ಬುಧವಾರ ತೈಲ ದರ ಕೇವಲ 1 ಪೈಸೆಯಷ್ಟು ಮಾತ್ರ ಇಳಿಕೆಯಾಗಿದೆ. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿ.(ಐಒಸಿಎಲ್‌) ವೆಬ್‌ಸೈಟ್‌ ದೋಷದಿಂದಾಗಿ 60 ಪೈಸೆ ಇಳಿಕೆ ಎಂದು ಪ್ರಕಟಗೊಂಡಿತ್ತು.

ಹದಿನಾರು ದಿನಗಳ ನಂತರವಾದರೂ ತೈಲ ದರ ಅತ್ಯಲ್ಪ ಇಳಿಕೆ ಕಂಡಿದ್ದು ಮುಂದಿನ ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯ ಮುನ್ಸೂಚನೆ ಎನ್ನುವ ವಿಶ್ವಾಸ ಕೆಲವೇ ಕ್ಷಣಗಳಲ್ಲಿ ಮುದುಡಿತು.

ಕ್ಲರಿಕಲ್‌ ಎರರ್‌ನಿಂದ ದರ ಇಳಿಕೆ 60 ಪೈಸೆ ಎಂದು ಪ್ರಕಟಗೊಂಡಿರುವುದಾಗಿ ಐಒಸಿಎಲ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದರಿಂದಾಗಿ ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹78.42, ಡೀಸೆಲ್‌ ₹69.30 ಹಾಗೂ ಮುಂಬೈನಲ್ಲಿ ಪೆಟ್ರೋಲ್‌ ದರ ₹86.23, ಡೀಸೆಲ್‌ ದರ ₹73.78 ಆಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತೈಲ ದರ ಏರಿಕೆಗೆ ಒಡ್ಡಿಕೊಂಡಿದ್ದ ತಡೆಯು ಮೇ 14ರಿಂದ ಮುಕ್ತಗೊಂಡಿತ್ತು. ಎರಡು ವಾರಗಳಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ ದರ ₹3.8 ಹಾಗೂ ಪ್ರತಿ ಲೀಟರ್‌ ಡೀಸೆಲ್‌ ದರ ₹3.38ರಷ್ಟು ಏರಿಕೆ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT