ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಸಾವು, 127 ಮಂದಿಗೆ ಸೋಂಕು

ಜಿಲ್ಲೆಯಲ್ಲಿ ಮುಂದುವರೆದ ಸೋಂಕಿತರ ಸರಣಿ
Last Updated 28 ಜುಲೈ 2020, 15:08 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ತನ್ನ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಮಂಗಳವಾರ 127 ಮಂದಿಗೆ ಸೋಂಕು ತಗುಲಿದ್ದು, 4 ಮಂದಿ ಮೃತಪಟ್ಟಿದ್ದಾರೆ. ಈವರೆಗೆ 47 ಮಂದಿ ಮೃತಪಟ್ಟು, ಸೋಂಕಿತರ ಸಂಖ್ಯೆ 1473ಕ್ಕೆ ಏರಿಕೆಯಾಗಿದೆ.

ತುಮಕೂರು ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಇರುವ ತಾಲ್ಲೂಕು ಎನಿಸಿಕೊಂಡಿದ್ದು, ಶೇ 45ರಷ್ಟು ಸೋಂಕಿತರಿದ್ದಾರೆ. ಮಂಗಳವಾರವೂ ಇಲ್ಲಿ 60 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲದೇ ಈವರೆಗೆ ಮೃತಪಟ್ಟವರಲ್ಲಿ ಶೇ 80ರಷ್ಟು ಮಂದಿ ತುಮಕೂರು ತಾಲ್ಲೂಕಿನವರೇ ಆಗಿದ್ದಾರೆ.

ಮಂಗಳವಾರ ಮೃತಪಟ್ಟ ನಾಲ್ಕು ಮಂದಿಯೂ ತುಮಕೂರು ನಗರದವರೇ ಆಗಿದ್ದಾರೆ. ಕೆಎಚ್‌ಬಿ ಕಾಲೊನಿ 51 ವರ್ಷದ ಮಹಿಳೆ, 68 ವರ್ಷದ ಪುರುಷ, ಜೈಪುರ ಬಡಾವಣೆ 70 ವರ್ಷದ ವೃದ್ಧೆ, ಎಸ್‌ಐಟಿ ಬಡಾವಣೆ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.

ಇನ್ನೂ ಸೋಂಕಿತರ ಸಂಖ್ಯೆ ಹೆಚ್ಚಿದಷ್ಟೇ ವೇಗವಾಗಿ ಗುಣಮುಖರಾಗುತ್ತಿರುವ ಸಂಖ್ಯೆಯೂ ಹೆಚ್ಚುತ್ತಿರುವುದು ಸಮಾಧಾನದ ಸಂಗತಿ. ಮಂಗಳವಾರ 17 ಮಂದಿ ಗುಣಮುಖರಾಗಿ ಮನೆಗಳಿಗೆ ಹಿಂದಿರುಗಿದ್ದಾರೆ. ಈವರೆಗೆ ತಾಲ್ಲೂಕಿನಲ್ಲಿ 265 ಮಂದಿ ಗುಣಮುಖರಾಗಿ ಮನೆಗಳಿಗೆ ಹಿಂದಿರುಗಿರುವುದು ಆತಂಕ ದೂರ ಮಾಡಿದೆ.

ಮಂಗಳವಾರ ದೃಢಪಟ್ಟ ಸೋಂಕಿತರಲ್ಲಿ 72 ಮಂದಿ ಪುರುಷರು, 55 ಮಂದಿ ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 32,270 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 28,273 ವರದಿಗಳು ನೆಗೆಟೀವ್‌ ಫಲಿತಾಂಶ ಬಂದಿದೆ. ಪ್ರಸ್ತುತ ಜಿಲ್ಲೆಯಲ್ಲಿ 761 ಸಕ್ರಿಯ ಸೋಂಕಿತರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT