ತುಮಕೂರು: ‘ಟಾಸ್ಕ್ಗಳಿಗೆ ಹಣ ಹೂಡಿಕೆ ಮಾಡಿ, ಲಿಂಕ್ಗಳಿಗೆ ರಿವೀವ್ ನೀಡಿದರೆ ಕಮಿಷನ್ ಕೊಡಲಾಗುವುದು’ ಎಂದು ನಂಬಿಸಿ ಸರ್ಕಾರಿ ಅಧಿಕಾರಿಗೆ ₹1.71 ಲಕ್ಷ ವಂಚಿಸಲಾಗಿದೆ.

ನಗರದ ಉಪ್ಪಾರಹಳ್ಳಿ ನಿವಾಸಿ ಶಾಜಿಯಾ ರಿಫಿತ್ ಸೈಬರ್ ಆರೋಪಿಗಳ ಬಲೆಗೆ ಬಿದ್ದು ಹಣ ಕಳೆದುಕೊಂಡಿದ್ದಾರೆ. ಟೆಲಿಗ್ರಾಮ್ ಮೂಲಕ ಮೆಸೇಜ್ ಮಾಡಿ ‘ಎಲೆಕ್ಟ್ರಾನಿಕ್ಸ್ ಗೂಡ್ಸ್ ಲಿಂಕ್’ಗಳಿಗೆ ರಿವೀವ್ ನೀಡಿದರೆ ದಿನಕ್ಕೆ ₹1 ಸಾವಿರದಿಂದ ₹1,200 ಕಮಿಷನ್ ಪಡೆಯಬಹುದು ಎಂದು ತಿಳಿಸಿದ್ದಾರೆ. ಪ್ರಾರಂಭದಲ್ಲಿ ಒಂದು ಲಿಂಕ್ ಕಳುಹಿಸಿದ್ದು, ಅದಕ್ಕೆ ರಿವೀವ್ ನೀಡಿದ ನಂತರ ರಿಫಿತ್ ಅವರ ಖಾತೆಗೆ ₹700 ವರ್ಗಾಯಿಸಿದ್ದಾರೆ.

ನಂತರ ನೀವು ಈ ಕೆಲಸ ಮುಂದುವರಿಸಬೇಕಾದರೆ ₹10 ಸಾವಿರ ವರ್ಗಾವಣೆ ಮಾಡುವಂತೆ ಹೇಳಿದ್ದಾರೆ. ಅದರಂತೆ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ. ಟಾಸ್ಕ್ ಪೂರ್ಣಗೊಳಿಸಿದ ನಂತರ ₹17 ಸಾವಿರ ಹಣ ರಫಿತ್ ಖಾತೆಗೆ ವಾಪಸ್ ಹಾಕಿದ್ದರು.

ಇದೇ ರೀತಿಯಾಗಿ ಹೆಚ್ಚಿನ ಹಣ ಹೂಡಿಕೆ ಉತ್ತಮ ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ. ಇದನ್ನು ನಂಬಿ ಹಂತ ಹಂತವಾಗಿ ₹2,25,807 ಹಣ ವರ್ಗಾಯಿಸಿದ್ದಾರೆ. ಇದರಲ್ಲಿ ಅವರಿಗೆ ₹54,700 ವಾಪಸ್ ಬಂದಿದೆ. ಹಾಕಿದ ಹಣ ವಾಪಸ್ ಕೇಳಿದಾಗ ಮತ್ತೆ ₹5 ಲಕ್ಷ ವರ್ಗಾವಣೆ ಮಾಡುವಂತೆ ಹೇಳಿದ್ದಾರೆ. ಇದೊಂದು ಮೋಸದ ಜಾಲ ಎಂದು ಅರಿತ ರಫಿತ್ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.