ಶನಿವಾರ, ಅಕ್ಟೋಬರ್ 24, 2020
23 °C

ಕಲುಷಿತ ನೀರು ಸೇವಿಸಿ 22 ಕುರಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋರ: ಹೋಬಳಿ ವಸಂತ ನರಸಾಪುರ ಕೈಗಾರಿಕಾ ಪ್ರದೇಶದ ಒಂದನೇ ಹಂತದಲ್ಲಿ ವಿಷಪೂರಿತ ನೀರು ಕುಡಿದು 22 ಕುರಿಗಳು ಮೃತಪಟ್ಟಿವೆ.

ತರೂರು ಹಾಗೂ ಚಿಕ್ಕದಾಸರಹಳ್ಳಿ ಗೊಲ್ಲರಹಟ್ಟಿಯ ವಲಸೆ ಕುರಿಗಾಹಿಗಳು ವಸಂತ ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ರೈತರ ಜಮೀನಿನಲ್ಲಿ ಮಂದೆ ಹಾಕಿ ಕುರಿ ಮೇಯಿಸುತ್ತಿದ್ದರು.

ಭಾನುವಾರ ಕೈಗಾರಿಕಾ ಪ್ರದೇಶದ ಅಕ್ಕಪಕ್ಕ ಕುರಿಗಾಹಿಗಳು ಕುರಿ ಮೇಯಿಸುತ್ತಿದ್ದರು. ಈ ವೇಳೆ ಫುಡ್‌ಪಾರ್ಕ್ ಸಮೀಪ ರೂಪಿಂಗ್, ಕೆಮಿಕಲ್ ಹಾಗೂ ಇತರೆ ಫ್ಯಾಕ್ಟರಿಗಳಿದ್ದು, ಈ ಕಾರ್ಖಾನೆಗಳಿಂದ ಬಿಡುಗಡೆಯಾದ ವಿಷ ತ್ಯಾಜ್ಯ ಸೇವಿಸಿ ಈ ಅವಘಡ ಸಂಭವಿಸಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳಕ್ಕೆ ಕೋರ ಠಾಣೆ ಪೊಲೀಸರು ಹಾಗೂ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.