ಹುಳಿಯಾರು: ಪಟ್ಟಣದ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಅಪಘಾತ ಸಂಖ್ಯೆ ಹೆಚ್ಚಿದೆ. ಇತರೆ ವಾಹನಗಳ ಸವಾರರು ರಸ್ತೆಗಿಳಿಯಲು ಭಯಪಡುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಕಳೆದ ವಾರ ಬೀದರ್-ಶ್ರೀರಂಗಪಟ್ಟಣ ಹೆದ್ದಾರಿಯ ಸಾಲ್ಕಟ್ಟೆ ಕ್ರಾಸ್ನಿಂದ ಯಳನಡುವರೆಗಿನ 25 ಕಿ.ಮೀ ದೂರದಲ್ಲಿ ಮೂರು ಅಪಘಾತ ಪ್ರಕರಣಗಳು ವರದಿಯಾಗಿದ್ದು, ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ಮೂರು ತಿಂಗಳಿನಿಂದ ಹುಳಿಯಾರು, ಹಂದನಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಏಳೆಂಟು ಪ್ರಕರಣ ದಾಖಲಾಗಿವೆ.

ದಾಖಲಾಗಿರುವ ಎಲ್ಲ ಪ್ರಕರಣಗಳು ತುಮಕೂರು-1 ಕೆಎಸ್ಆರ್ಟಿಸಿ ವಿಭಾಗದ ಬಸ್ಗಳಾಗಿವೆ. ಎಲ್ಲವೂ ಹೊಸದುರ್ಗ-ಬೆಂಗಳೂರು ಮಧ್ಯೆ ಸಂಚರಿಸಿವೆ. ಬಸ್ಗಳಲ್ಲಿ 60ಕಿ.ಮೀ ಮೇಲೆ ಚಲಿಸದಂತೆ ವೇಗಮಿತಿ ಅಳವಡಿಸಲಾಗಿದ್ದರೂ ಅಚಾತುರ್ಯ ಸಂಭವಿಸುತ್ತಿವೆ.

ಬಸ್ಗಳನ್ನು ಊಟ-ತಿಂಡಿಗೆ ಹೊಟೆಲ್ಗಳ ಬಳಿ ನಿಲುಗಡೆ ಮಾಡಿ ಸಮಯ ಸರಿದೂಗಿಸಲು ವೇಗ ಚಾಲನೆಯೂ ಕಾರಣ ಇರಬಹುದು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಸಾರಿಗೆ ಹಾಗೂ ಕೆಎಸ್ಆರ್ಟಿಸಿ ನಿಯಂತ್ರಣಾಧಿಕಾರಿ ಜಂಟಿ ಕಾರ್ಯಾಚರಣೆ ನಡೆಸಿ ಅಪಘಾತ ತಡೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.