ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮತ್ತೆ 5 ಮಂದಿ ಸಾವು

Last Updated 12 ಜೂನ್ 2021, 2:34 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ದೃಢಪಡುವ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗುತ್ತಿಲ್ಲ. ಗುರುವಾರ 571 ಮಂದಿಗೆ ಸೋಂಕು ತಗುಲಿದ್ದರೆ, ಶುಕ್ರವಾರ 576 ಜನರಿಗೆ ಸೋಂಕು ಖಚಿತಪಟ್ಟಿದೆ. ಒಂದು ಹಂತಕ್ಕೆ ಇಳಿಮುಖವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿಲ್ಲ. ಗುರುವಾರ 5 ಮಂದಿ ಮೃತಪಟ್ಟಿದ್ದರೆ, ಇಂದು ಸಹ 5 ಜನರು ಸಾವು ಕಂಡಿದ್ದಾರೆ. ತುಮಕೂರು
ನಗರ ಹಾಗೂ ತಾಲ್ಲೂಕಿನಲ್ಲಿ ಯಾರೊಬ್ಬರು ಸಾವನ್ನಪ್ಪದಿರುವುದು ನಗರದ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ. ತುರುವೇಕೆರೆ ತಾಲ್ಲೂಕಿನಲ್ಲಿ 3, ತಿಪಟೂರು ಹಾಗೂ ಶಿರಾ ತಾಲ್ಲೂಕಿನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ತಾಲ್ಲೂಕುವಾರು ವಿವರ: ತುಮಕೂರು ತಾಲ್ಲೂಕಿನಲ್ಲಿ 103, ಚಿಕ್ಕನಾಯಕನಹಳ್ಳಿ 46, ಗುಬ್ಬಿ 45, ಕೊರಟಗೆರೆ 18, ಕುಣಿಗಲ್ 24, ಮಧುಗಿರಿ 19, ಪಾವಗಡ 67, ಶಿರಾ 10, ತಿಪಟೂರು 58, ತುರುವೇಕೆರೆ ತಾಲ್ಲೂಕಿನಲ್ಲಿ 26 ಹಾಗೂ ಇತರೆ 160 ಮಂದಿಗೆ ಸೋಂಕು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT