ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕನಾಯಕನಹಳ್ಳಿ: ಚುನಾವಣಾ ಮಾಹಿತಿ ಹಂಚಿಕೆಗೆ ಹೊಸ ಆ್ಯಪ್

Last Updated 2 ಏಪ್ರಿಲ್ 2023, 6:14 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೇ ಕುಳಿತು ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಎ.ಇ. ರಘು ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ವ್ಯಾಪ್ತಿಯಲ್ಲಿ ಅಂತಹ 5,500 ಮತದಾರರನ್ನು ಗುರುತಿಸಲಾಗಿದೆ. ಮತಗಟ್ಟೆಗೆ ಬಂದು ಮತದಾನ ಮಾಡಲು ಸಾಧ್ಯವಾಗದವರು ಮತಗಟ್ಟೆ ಅಧಿಕಾರಿ, ಪೊಲೀಸ್‌ ಅಧಿಕಾರಿ ಅವರನ್ನು ಒಳಗೊಂಡ ತಂಡದ ಸಮ್ಮುಖದಲ್ಲಿ ಬ್ಯಾಲೆಟ್‌ ಮೂಲಕ ಗುಪ್ತವಾಗಿ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮತಗಟ್ಟೆಗೆ ಬಂದು ಮತದಾನ ಮಾಡಲು ಇಚ್ಛಿಸಿದರೆ ಅದಕ್ಕೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಈ ಬಾರಿ ಎನ್‌ಕೋರ್‌ ಆ್ಯಪ್‌ ಪರಿಚಯಿಸಲಾಗಿದೆ. ಈ ಪೋರ್ಟಲ್‌ನಲ್ಲಿ ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಮಾಹಿತಿ ವೀಕ್ಷಿಸಬಹುದು. ನಾಮಪತ್ರ ಸಲ್ಲಿಕೆ, ಅಭ್ಯರ್ಥಿಗಳ ಖರ್ಚಿನ ವಿವರ, ಅವರು ಸಲ್ಲಿಸುವ ಘೋಷಣಾ ಪತ್ರಗಳನ್ನು ಅದರಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ ಎಂದು ತಿಳಿಸಿದರು.

ಸಾರ್ವಜನಿಕರು, ಚುನಾವಣಾ ಅಭ್ಯರ್ಥಿಗಳು ಸಭೆ, ಸಮಾರಂಭ ಮಾಡಲು ಚುನಾವಣಾ ಆಯೋಗದ ಅನುಮತಿ ಪಡೆದುಕೊಳ್ಳಲು ಸುವಿಧಾ, ಸುಗಮ, ಸಮಾಧಾನ ಎಂಬ ಪೋರ್ಟಲ್‌ ಪರಿಚಯಿಸಲಾಗಿದೆ ಎಂದರು.

ಕ್ಷೇತ್ರದಲ್ಲಿ ಒಟ್ಟು 2,15,210 ಮತದಾರರಿದ್ದಾರೆ. ಈ ಪೈಕಿ 1,06,950 ಪುರುಷ, 1,08,248 ಮಹಿಳೆಯರು, ಇತರೆ ಒಬ್ಬರು ಮತದಾರರಿದ್ದಾರೆ. ಏ. 11ರ ವರೆಗೆ ನಮೂನೆ 6ರಲ್ಲಿ ಮತದಾರರ ಪಟ್ಟಿಗೆ ಹೊಸಬರ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 728 ವಿಐಪಿ ಮತದಾರರನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ನೀತಿ ಸಂಹಿತೆ ಅಡಿಯಲ್ಲಿ 24 ಸೆಕ್ಟರ್‌ ಅಧಿಕಾರಿಗಳು, ಅಕ್ರಮ ತಡೆಗೆ 6 ಎಫ್‌ಎಸ್‌ಟಿ, 3 ಎಸ್‌ಎಸ್‌ಟಿ, ತಲಾ ಒಬ್ಬರು ವಿವಿಟಿ, ವಿಎಸ್‌ಟಿ, ಇಎನ್‌ಸಿಒಆರ್‌ಇ, ವೆಚ್ಚದ ಲೆಕ್ಕಾಧಿಕಾರಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ವ್ಯಾಪ್ತಿಯ ಕೆಂಕೆರೆ, ಯಳನಾಡು, ದೊಡ್ಡಎಣ್ಣೆಗೆರೆಯಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಈಗಾಗಲೇ ಅಲ್ಲಿ ಅಧಿಕಾರಿಗಳು ಕರ್ತವ್ಯ ನಿರತರಾಗಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರದ ವ್ಯಾಪ್ತಿ 262 ಮತಗಟ್ಟೆಗಳಿವೆ. ಇದರಲ್ಲಿ 2 ಸೂಕ್ಷ್ಮ ಮತಗಟ್ಟೆಗಳಿವೆ. ಮಾಕುವಳ್ಳಿ, ಗೌರಸಾಗರದಲ್ಲಿ ತಲಾ ಒಂದು ದುರ್ಬಲ ವರ್ಗದವರ ಮತಗಟ್ಟೆ ಗುರುತಿಸಲಾಗಿದೆ ಎಂದ ಅವರು, ತಾಲ್ಲೂಕು ಕಚೇರಿಯಲ್ಲಿ ದೂರು ನಿರ್ವಹಣೆಗೆ ಸಹಾಯವಾಣಿ (08133–267242) ಸ್ಥಾಪಿಸಲಾಗಿದೆ. ತಹಶೀಲ್ದಾರ್‌ ಅರ್ಚನಾ ಭಟ್‌ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.

ಗ್ರೇಡ್‌ 2 ತಹಶೀಲ್ದಾರ್‌ ಕೀರ್ತಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT