ಗುಬ್ಬಿ: ತಾಲ್ಲೂಕಿನ ನಿಟ್ಟೂರು ಗ್ರಾಮದ ಬೆಸ್ಕಾಂ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿ
ಯರ್(ಎಇಇ) ಮಾಯಕಣ್ಣ ನಾಯಕ್ ಅವರು ಹಾಲಿನ ಶಿಥಿಲೀಕರಣ ಘಟಕಕ್ಕೆ ವಿದ್ಯುತ್ ಸಂರ್ಪಕದ ಮಂಜೂರಾತಿ ನೀಡಲು ₹ 4,000 ಲಂಚ ಪಡೆಯುವಾಗ ಭ್ರಷ್ಟಾಚಾರ ನಿಗ್ರಹ ದಳದ(ಎ.ಸಿ.ಬಿ.) ಬಲೆಗೆ ಬಿದ್ದಿದ್ದಾರೆ.

ಮದನಘಟ್ಟದಲ್ಲಿ ದಾಕ್ಷಾಯಿಣಮ್ಮ ಎಂಬುವರು ಹಾಲಿನ ಶಿಥಿಲೀಕರಣ ಘಟಕ ಆರಂಭಿಸುತ್ತಿದ್ದಾರೆ. ಅದಕ್ಕೆ 38 ಎಚ್.ಪಿ. ಸಾಮರ್ಥ್ಯದ ವಿದ್ಯುತ್ ಸಂಪರ್ಕ ಕಲ್ಪಿಸುವ ಗುತ್ತಿಗೆಯನ್ನು ಕಡಬ ಹೋಬಳಿಯ ತೊಗರಿಘಟ್ಟದ ಬಿ.ಸಿದ್ದೇಶ್ವರ ಅವರಿಗೆ ನೀಡಿದ್ದರು.

ಸಿದ್ದೇಶ್ವರ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ್ದಾಗ, ಎ.ಇ.ಇ. ಅವರು ₹ 10,000ಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ ₹ 4000 ಪಡಿದಿದ್ದರು. ಉಳಿದ ಮೊತ್ತದಲ್ಲಿ ಮತ್ತೆ ₹ 4,000 ಅನ್ನು ಶುಕ್ರವಾರ ಪಡೆಯುತ್ತಿದ್ದಾಗ, ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು.

ಡಿ.ವೈ.ಎಸ್.ಪಿ. ಉಮಾಶಂಕರ್, ಪಿಎಸ್ಐ ರಮೇಶ್, ಸಿಬ್ಬಂದಿಗಳಾದ ಚಂದ್ರಶೇಖರ್, ನರಸಿಂಹರಾಜು, ಇದ್ದರು ಎಂದು ಎ.ಸಿ.ಬಿ. ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.