ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಸಚಿವರ ಪ್ರತಿಕೃತಿ ದಹಿಸಿ ಪ್ರತಿಭಟನೆ

Last Updated 16 ಸೆಪ್ಟೆಂಬರ್ 2020, 5:44 IST
ಅಕ್ಷರ ಗಾತ್ರ

ಕೊರಟಗೆರೆ: ರೈತಪರ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೃಷಿ ಸಚಿವ ಬಿ.ಸಿ.ಪಾಟೀಲ ನೀಡಿರುವ ‘ಅಜ್ಞಾನಿ’ ಎಂಬ ಹೇಳಿಕೆಯನ್ನು ಹಿಂದಕ್ಕೆ ಪಡೆಯದಿದ್ದರೆ ರೈತಸಂಘ ಮತ್ತು ಹಸಿರುಸೇನೆ ತಕ್ಕಪಾಠ ಕಲಿಸಲಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಪಟೇಲ್ ಹುಲಿಕಟ್ಟೆ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಲಾಕ್‌ಡೌನ್ ಮತ್ತು ಸೀಲ್‌ಡೌನ್ ಹುನ್ನಾರ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತಂದಿವೆ. ಚುನಾವಣೆ ವೇಳೆ ಜನರ ಬಳಿ ಭಿಕ್ಷೆ ಬೇಡುವ ಜನನಾಯಕರು ಈಗ ಖಾಸಗಿ ಕಂಪನಿಗಳ ಹಿಂಬಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ರೈತ ವಿರೋಧಿ ಕಾನೂನು ನೀತಿಗಳ ವಿರುದ್ಧ ರೈತ ಸಂಘ ಮತ್ತು ಹಸಿರುಸೇನೆಯಿಂದ ಸೆ.21ರಂದು ಬೆಂಗಳೂರು ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿ ನಂತರ ಮುಖ್ಯರಸ್ತೆಯಲ್ಲಿ ಕೃಷಿ ಸಚಿವರ ಹೇಳಿಕೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ ಬಿ.ಸಿ.ಪಾಟೀಲ ಪ್ರತಿಕೃತಿ ದಹನ ಮಾಡಿದರು.

ಕೊರಟಗೆರೆ ಘಟಕದ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷ ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಕಾರ್ಯದರ್ಶಿ ಪ್ರಸನ್ನಕುಮಾರ್, ಸಂಚಾಲಕ ಮಂಜಣ್ಣ, ಲೋಕೇಶ್, ಮಲ್ಲೇಶಯ್ಯ, ಜಿಲ್ಲಾ ಕಾರ್ಯದರ್ಶಿ ರುದ್ರೇಶ್‌ಗೌಡ, ರೈತ ಮುಖಂಡರಾದ ಬಸವರಾಜು, ವೀರಣ್ಣ, ಶಶಿಧರ್, ಮಧುಕುಮಾರ್, ಶಿವಣ್ಣ, ಲಕ್ಷ್ಮನಾಯ್ಕ, ಶಿವರಾಜು, ಲಕ್ಷ್ಮಣ್, ಲಕ್ಷ್ಮಿಕಾಂತ, ಮಂಜುನಾಥ, ಚಂದ್ರಶೇಖರ್, ನಂಜುಂಡಪ್ಪ, ರವಿಕುಮಾರ್, ವೀರರೆಡ್ಡಿ, ಸಿದ್ದೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT