ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಸರಳವಾಗಿ ಅಂಬೇಡ್ಕರ್‌ ಜಯಂತಿ ಆಚರಣೆ

ಸಾಂಕೇತಿಕ ಆಚರಣಗೆ ಒತ್ತು ನೀಡಿದ ಸಂಘ–ಸಂಸ್ಥೆಗಳು; ಸಭಿಕರಿಲ್ಲದೆ ನಡೆದ ಸ್ಮರಣೆ
Last Updated 14 ಏಪ್ರಿಲ್ 2020, 16:18 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿನ ಕೆಲವು ಸರ್ಕಾರಿ ಕಚೇರಿಗಳು, ರಾಜಕೀಯ ಪಕ್ಷಗಳ ಕಚೇರಿಗಳು, ಸಂಘ–ಸಂಸ್ಥೆಗಳ ಆವರಣದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು.

ಕೊರೊನಾ ಸೋಂಕಿನ ಭೀತಿಯಿಂದಾಗಿ ಜಯಂತಿಯ ಆಚರಣೆ ಸಾಂಕೇತಿಕವಾಗಿತ್ತು. ಅಂಬೇಡ್ಕರ್‌ ಭಾವಚಿತ್ರದ ಮೆರವಣಿಗೆಗಳು ಇರಲಿಲ್ಲ. ವೇದಿಕೆ ಕಾರ್ಯಕ್ರಮಗಳು ನಡೆಯಲಿಲ್ಲ. ಸುದೀರ್ಘ ಭಾಷಣಗಳೂ ಕೇಳಿ ಬರಲಿಲ್ಲ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಬಾಸಾಹೇಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಕೆ.ರಾಕೇಶ್‌ಕುಮಾರ್, ಜಿ.ಪಂ ಸದಸ್ಯ ಹುಚ್ಚಯ್ಯ, ಜಿ.ಪಂ ಮುಖ್ಯ ಕಾರ್ಯನಿರ್ವಣಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಂಶಿಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರೇಮನಾಥ್ ಹಾಜರಿದ್ದರು.

ಪೌರಕಾರ್ಮಿಕರ ಸಂಘ: ನಗರದ ಜನಚಳವಳಿ ಕೇಂದ್ರದಲ್ಲಿ ಜಿಲ್ಲಾ ಪೌರಕಾರ್ಮಿಕರ ಸಂಘದಿಂದಲೂ ಜಯಂತಿ ಆಚರಿಸಲಾಯಿತು. ಚಿಂತಕ ಕೆ.ದೊರೈರಾಜ್‌ ಮಾತನಾಡಿ, ದೇಶದಲ್ಲಿ ಕೊರೊನಾ ಭೀತಿಗಿಂತ ಜಾತಿ, ಧರ್ಮದ ವೈರಸ್‌ ವ್ಯಾಪಕವಾಗಿ ಹಬ್ಬುತ್ತಿದೆ. ಕೆಲವೇ ಜನರು ದ್ವೇಷದ ವೈರಸ್‌ ಹರಡುತ್ತಿದ್ದಾರೆ. ಕೊರೊನಾವನ್ನು ಗುಣಪಡಿಸಿಬಹುದು. ಆದರೆ, ದ್ವೇಷದ ವೈರಸ್‌ನಿಂದಲೇ ಹೆಚ್ಚು ಅಪಾಯ ಕಾದಿದೆ ಎಂದು ಎಚ್ಚರಿಸಿದರು.

ಪ್ರೀತಿ, ಕರುಣೆ ಮತ್ತು ಭ್ರಾತೃತ್ವ ಈ ಮೂರನ್ನು ಬಳಸಿಕೊಂಡು ಮನುಷ್ಯತ್ವದ ವಿವೇಕವನ್ನು ನಮ್ಮಲ್ಲಿ ಮೂಡಿಸಬೇಕು. ಜನರು ಎಚ್ಚರ ಇಟ್ಟುಕೊಳ್ಳಬೇಕು. ಸೌಹಾರ್ದ ವಾತಾವರಣ ಮೂಡಿಸಬೇಕು ಎಂದರು.

ಸ್ಲಂಜನಾಂದೋಲನ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ವೈದ್ಯೆ ಅರುಂಧತಿ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಬಿ.ಉಮೇಶ್, ಪಾಲಿಕೆ ಕಾರ್ಮಿಕರ ಸಂಘದ ಖಜಾಂಚಿ ಸಿ.ವೆಂಕಟೇಶ್ ಇದ್ದರು.

ಬೆಳಗುಂಬ ರಸ್ತೆಯಲ್ಲಿನ ಸ್ಲಂ ಜನಾಂದೋಲನಾ ಸಮಿತಿಯ ಕಚೇರಿಯಲ್ಲೂ ಸರಳವಾಗಿ ಆಚರಿಸಲಾಯಿತು.

ತುಮಕೂರು ವಿ.ವಿ: ತುಮಕೂರು ವಿಶ್ವವಿದ್ಯಾನಿಲಯದ ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಕೇಂದ್ರದಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡು ಜಯಂತಿ ಆಯೋಜಿಸಲಾಗಿತ್ತು. ಕುಲಪತಿ ವೈ.ಎಸ್.ಸಿದ್ದೇಗೌಡ ಮಾತನಾಡಿ, ಮಾನವತವಾದಿ ಅಂಬೇಡ್ಕರ್ ನವಭಾರತ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಪುಸ್ತಕಗಳನ್ನು ಓದಿ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.

ಮಾಲ್ಯಮಾಪನ ಕುಲಸಚಿವ ಬಿ.ರಮೇಶ್, ಕುಲಸಚಿವ ಕೆ.ಎನ್.ಗಂಗಾ ನಾಯ್ಕ್, ಅಧ್ಯಯನ ಕೇಂದ್ರದ ನಿರ್ದೇಶಕ ಜಿ.ಬಸವರಾಜ್ ಇದ್ದರು.

ಕಾಂಗ್ರೆಸ್‌, ಜೆಡಿಎಸ್‌ನ ಜಿಲ್ಲಾ ಘಟಕದ ಕಚೇರಿಗಳಲ್ಲೂ ಜಯಂತಿ ಆಚರಣೆ ನಡೆಯಿತು. ಜೆಡಿಎಸ್‌ ಮುಖಂಡ ಎಚ್.ನಿಂಗಪ್ಪ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಅವರ ತತ್ವಾದರ್ಶವನ್ನು ನಾವೆಲ್ಲರೂ ಪಾಲಿಸಬೇಕು ಎಂದು ಹೇಳಿದರು.

ಪಕ್ಷದ ನಗರ ಘಟಕದ ಅಧ್ಯಕ್ಷ ಬೆಳ್ಳಿ ಲೋಕೇಶ್, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಎಸ್ಸಿ-ಎಸ್ಟಿ ಘಟಕದ ಕಾರ್ಯಾಧ್ಯಕ್ಷ ಗೋವಿಂದರಾಜು ಇದ್ದರು.

ಜಯಂತಿ ಆಚರಣೆ

ಮಧುಗಿರಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದ ಕಟ್ಟೆ ಕಡೆಯ ವ್ಯಕ್ತಿಗೂ ಸಂವಿಧಾನ ಒದಗಿಸಿದ್ದಾರೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಮಂಗಳವಾರ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿ ದೇವಿ, ತಹಶೀಲ್ದಾರ್ ಡಾ.ಜಿ.ವಿಶ್ವನಥ್, ತಾಲ್ಲೂಕು ಪಂಚಾಯಿತಿ ಇಒ ಡಿ.ದೊಡ್ಡಸಿದ್ದಯ್ಯ, ಸಮಾಜ ಕಲ್ಯಾಣಾಧಿಕಾರಿ ಹರೀಶ್, ಬಿಇಒ ರಂಗಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ರಮೇಶ್ ಬಾಬು, ಗ್ರೇಡ್ 2 ತಹಶೀಲ್ದಾರ್ ನವೀನ್, ಪುರಸಭೆ ಮುಖ್ಯಾಧಿಕಾರಿ ಅಮರ ನಾರಾಯಣ, ಸದಸ್ಯರಾದ ಎಂ.ಆರ್.ಜಗನ್ನಾಥ್, ನರಸಿಂಹಮೂರ್ತಿ, ದಲಿತ ಒಕ್ಕೂಟದ ಅಧ್ಯಕ್ಷ ಸಂಜೀವ ಮೂರ್ತಿ, ಮಹರಾಜು, ಕಾರ್ಯದರ್ಶಿ ನರಸಿಂಹ ರಾಜು, ಸ.ನೌ.ಸಂಘದ ಖಜಾಂಚಿ ಚಿಕ್ಕರಂಗಯ್ಯ, ದಲಿತ ಮುಂಖಡರಾದ ವಕೀಲ ನರಸಿಂಹ ಮೂರ್ತಿ, ದೊಡ್ಡೇರಿ ಕಣಿಮಯ್ಯ, ಕೇಬಲ್ ಸುಬ್ಬು, ತೊಂಡೋಟಿ ರಾಮಂಜಿ, ಎಂ.ವೈ.ಶಿವಕುಮಾರ್, ಸಂಜೀವಯ್ಯ, ಚಿಕ್ಕಮ್ಮ, ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT