ಚಿಕ್ಕನಾಯಕನಹಳ್ಳಿ: ಪಟ್ಟಣಕ್ಕೆ ಅಮೃತ ಜಲ ಯೋಜನೆಯಡಿ ₹72 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭವಾಗುತ್ತದೆ. ಯುಜಿಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ರಸ್ತೆಗಳ ದುರಸ್ತಿಯನ್ನು ಹಂತಹಂತವಾಗಿ ಮಾಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ‘ಮನೆಬಾಗಿಲಿಗೆ ಮನೆ ಮಗ’ ಕಾರ್ಯಕ್ರಮದಡಿ ಪುರಸಭೆಯ 20, 21, 22, 23ನೇ ವಾರ್ಡ್ಗಳಿಗೆ ಭೇಟಿ ನೀಡಿ ಮಾತನಾಡಿದರು.

ಪಟ್ಟಣದಲ್ಲಿ ಯುಜಿಡಿ ಕಾಮಗಾರಿಯಿಂದಾಗಿ ರಸ್ತೆಗಳು ಹಾಳಾಗಿವೆ. ಅವುಗಳನ್ನು ಈಗ ದುರಸ್ತಿ ಮಾಡಿದರೆ ಮತ್ತೆ ಅಮೃತ್ಜಲ್ ಯೊಜನೆಗಾಗಿ ಅಗೆಯುತ್ತಾರೆ. ಆದ್ದರಿಂದ ಈ ಎಲ್ಲ ಕಾಮಗಾರಿ ಮುಗಿದ ತಕ್ಷಣ ಸಿ.ಸಿ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

ಅಂಬೇಡ್ಕರ್ ನಗರದ ಸಮುದಾಯ ಭವನಕ್ಕೆ ₹5 ಲಕ್ಷ ಹಾಗೂ ಪಟ್ಟಣದ ಆಡಳಿತಸೌಧ ಮುಂಭಾಗ ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಕಂಚಿನ ಪ್ರತಿಮೆಗಳನ್ನು ನಿರ್ಮಿಸಲಾಗುವುದು ಎಂದರು.

ಪುರಸಭಾದ್ಯಕ್ಷ ಸಿ.ಎಚ್. ದಯಾನಂದ್, ಉಪಾದ್ಯಕ್ಷ ಸಿ.ಎಂ.ರಾಜಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಸುರೇಶ್, ಸದಸ್ಯರಾದ ಪೂರ್ಣಿಮ, ಮಮತ ದೃವಕುಮಾರ್, ಕೆ.ಮಲ್ಲಿಕಾರ್ಜುನಸ್ವಾಮಿ, ಮಂಜನಾಥ್ಗೌಡ, ಲಕ್ಷ್ಮಮ್ಮ, ಮಲ್ಲೇಶಯ್ಯ, ಸಿ.ಬಿ. ತಿಪ್ಪೇಸ್ವಾಮಿ, ಸಿ.ಎಂ.ರೇಣುಕಮ್ಮ, ಪುಷ್ಪಾ ಹನುಮಂತರಾಜು, ಚಂದ್ರಶೇಖರಯ್ಯ, ಕೆಂಪಮ್ಮ, ಪುರಸಭಾ ಮುಖ್ಯಾಧಿಕಾರಿ ಮಂಜಮ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.