ಅನಂತಕುಮಾರ್ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ

7
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಎಚ್.ಎನ್.ಅನಂತಕುಮಾರ್‌ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಕೆ

ಅನಂತಕುಮಾರ್ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟ

Published:
Updated:
Deccan Herald

ತುಮಕೂರು: ಕೇಂದ್ರ ಸಚಿವ ಎಚ್.ಎನ್.ಅನಂತಕುಮಾರ್‌ ಅವರ ನಿಧನದ ನಿಮಿತ್ತ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಾಸಕ ಬಿ.ಜಿ.ಜ್ಯೋತಿಗಣೇಶ್‌ ಹಾಗೂ ಕಾರ್ಯಕರ್ತರು ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಅನಂತಕುಮಾರ್‌ ಅವರು ವಿಧಿವಶರಾಗಿ ನಮ್ಮನ್ನೆಲ್ಲ ಅಗಲಿರುವುದು ದೇಶಕ್ಕೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ವಿಷಾದಿಸಿದರು.

ವಿದ್ಯಾರ್ಥಿ ದೆಸೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರಾಗಿ ಹಲವಾರು ಹೋರಾಟಗಳಲ್ಲಿ ನೇತೃತ್ವ ವಹಿಸಿದ್ದರು. ಕೆಲವು ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿ ನಂತರ ಪಕ್ಷದಲ್ಲಿ ಮುಖ್ಯ ಜವಾಬ್ದಾರಿಗಳನ್ನು ನಿರ್ವಹಿಸಿ 1996 ರಿಂದ ನಿರಂತರವಾಗಿ ಸಂಸದರಾಗಿ ಸೋಲಿಲ್ಲದ ಸರದಾರರಾಗಿದ್ದರು ಎಂದು ಸ್ಮರಿಸಿದರು.

ವಾಜಪೇಯಿ ಅವರಿಂದ ನರೇಂದ್ರ ಮೋದಿ ಸರ್ಕಾರದವರಗೆ ಸಚಿವರಾಗಿ, ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ. ಕರ್ನಾಟಕದಲ್ಲಿ ಪಕ್ಷದ ಸದೃಢತೆಗೆ ಅವರ ಕೊಡುಗೆ ಅಪಾರವಾದುದು. ಅವರ ಅಗಲಿಕೆ ತುಂಬಾಲಾರದ ನಷ್ಟವಾಗಿದೆ. ಕಾರ್ಯಕರ್ತರಿಗೆ ಮತ್ತು ಅವರ ಕುಟುಂಬಕ್ಕೆ ದೇವರು ದುಂಖ ನೀಗಿಸುವ ಶಕ್ತಿ ನೀಡಲಿ, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.

ಬಿಜೆಪಿ ಹಿರಿಯ ಮುಖಂಡ ಪಿ.ಕೃಷ್ಣಪ್ಪ ಮಾತನಾಡಿ, ’ಪಕ್ಷ ಸಂಘಟನೆಯಲ್ಲಿ ಅವರು ಅತ್ಯಂತ ಕ್ರಿಯಾಶೀಲವಾಗಿದ್ದರು. ಎಲ್.ಕೆ.ಅಡ್ವಾಣಿ ಅವರ ಜೊತೆ ಕರ್ನಾಟಕದಲ್ಲಿ ನಡೆಸಿದ ಚುನಾವಣೆಗಳ ಸಂದರ್ಭದಲ್ಲಿ ನಮ್ಮೆಲ್ಲರ ಒಡನಾಟ ಮರೆಯಲಾಗುವುದಿಲ್ಲ ಎಂದು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿದರು’.

ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ದೊಡ್ಡಮನೆ ಗೋಪಾಲಗೌಡ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನಯ್ಯ, ಮುಂಡರಾದ ಹೆಬ್ಬಾಕ ರವಿಶಂಕರ್, ಎಂ.ವೈ.ರುದ್ರೇಶ್, ಸಿ.ಎನ್.ರಮೇಶ್, ಎಚ್.ಎಂ.ರವೀಶಯ್ಯ, ಮಹಾನಗರಪಾಲಿಕೆ ಸದಸ್ಯರಾದ ಮಂಜುಳಾ ಆದರ್ಶ್, ನಳಿನಾ, ಕೃಷ್ಣಪ್ಪ, ಮಲ್ಲಿಕಾರ್ಜುನ ಮತ್ತು ಸರೋಜಗೌಡ್ರು, ಟಿ.ಎಚ್.ಹನುಮಂತರಾಜು, ಸಂದೀಪ್‌ಗೌಡ ಹಾಗೂ ಶ್ರೀನಿವಾಸ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !